ಮಂಗಳೂರು ಡ್ರಗ್ ಪೆಡ್ಲರ್ಗಳಿಗೆ ಅ.9 ರವರೆಗೆ ನ್ಯಾಯಾಂಗ ಬಂಧನ - ನ್ಯಾಯಾಂಗ ಬಂಧನ
ಮಂಗಳೂರಿನಲ್ಲಿ ಬಂಧಿತರಾಗಿರುವ ಡ್ರಗ್ ಪೆಡ್ಲರ್ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಹಾಗೂ ಅಕೀಲ್ ನೌಶೀನ್ಗೆ ಅಕ್ಟೋಬರ್ 9 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮಂಗಳೂರಿನ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಮಂಗಳೂರು: ನಗರದಲ್ಲಿ ಬಂಧನಕ್ಕೊಳಗಾಗಿರುವ ಡ್ರಗ್ ಪೆಡ್ಲರ್ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಹಾಗೂ ಅಕೀಲ್ ನೌಶೀನ್ಗೆ ಅಕ್ಟೋಬರ್ 9 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಂಗಳೂರಿನ ವಿಶೇಷ ನ್ಯಾಯಾಲಯದ ಮುಂದೆ ಇಂದು ಸಂಜೆ ಈ ಇಬ್ಬರು ಆರೋಪಿಗಳನ್ನು ನಾರ್ಕೊಟಿಕ್ ಕ್ರೈಂ ಪೊಲೀಸರು ಹಾಜರುಪಡಿಸಿದ್ದರು. ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪೊಲೀಸರು ಹಾಜರು ಪಡಿಸಿದ್ದಾರೆ.
ಸೆಪ್ಟೆಂಬರ್ 19 ರಂದು ಡ್ರಗ್ಸ್ ಸಮೇತ ಬಂಧನಕ್ಕೀಡಾಗಿದ್ದ ಆರೋಪಿಗಳಾದ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಹಾಗೂ ಅಕೀಲ್ ನೌಶೀನ್ ಕಳೆದ ಆರು ದಿನಗಳಿಂದ ನಾರ್ಕೊಟಿಕ್ ಪೊಲೀಸರ ವಶದಲ್ಲಿದ್ದರು.