ಮಂಗಳೂರು ;ಮಂಗಳೂರಿನಲ್ಲಿ 1 ವರ್ಷದ ಮಗುವನ್ನು ಅನಧಿಕೃತವಾಗಿ ತಂದು ಮಹಿಳೆಯೊಬ್ಬರು ಸಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷದ ಬಳಿಕ ಕೇಸ್ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸರ್ಜಿತ್ ಎಂಬುವರಿಂದ ಒಂದು ವರ್ಷದ ಹೆಣ್ಣು ಮಗುವನ್ನು ಹಾಜಿರ ಎಂಬಾಕೆ ತಂದು ಸಾಕಿದ್ದಳು. ಮಂಗಳೂರಿನ ಪಂಪ್‌ವೆಲ್ ಬಳಿ ಈಕೆ ಸುಮಾರು ಎರಡೂವರೆ ತಿಂಗಳಿನಿಂದ ಸಾಕುತ್ತಿದ್ದಳು.
1 ವರ್ಷದ ಮಗುವನ್ನು ಅನಧಿಕೃತವಾಗಿ ತಂದು ಸಾಕಿದ ಮಹಿಳೆ ; 2 ವರ್ಷದ ಬಳಿಕ ದೂರು ದಾಖಲು - ಮಹಿಳೆ ವಿರುದ್ಧ ಮಂಗಳೂರು ಚೈಲ್ಡ್ ಲೈನ್ನಿಂದ ದೂರು
ಮಹಿಳೆ ಅನಧಿಕೃತವಾಗಿ ಮಗುವನ್ನು ಸಾಕುತ್ತಿರುವ ಬಗ್ಗೆ ಮಾಹಿತಿ ಪಡೆದ ಚೈಲ್ಡ್ ಲೈನ್ನವರು 2018ರ ಅಕ್ಟೋಬರ್ 29ರಂದು ದಾಳಿ ನಡೆಸಿ ಮಗುವನ್ನು ರಕ್ಷಿಸಿದ್ದರು. ಬಳಿಕ ಮಗುವನ್ನು ರಾಮಕೃಷ್ಣ ವಾತ್ಸಲ್ಯ ಧಾಮ ದತ್ರು ಕೇಂದ್ರದಲ್ಲಿ ಆರೈಕೆ ಮಾಡಲಾಗಿತ್ತು..
ಮಂಗಳೂರು
ಮಹಿಳೆ ಅನಧಿಕೃತವಾಗಿ ಮಗುವನ್ನು ಸಾಕುತ್ತಿರುವ ಬಗ್ಗೆ ಮಾಹಿತಿ ಪಡೆದ ಚೈಲ್ಡ್ ಲೈನ್ನವರು 2018ರ ಅಕ್ಟೋಬರ್ 29ರಂದು ದಾಳಿ ನಡೆಸಿ ಮಗುವನ್ನು ರಕ್ಷಿಸಿದ್ದರು. ಬಳಿಕ ಮಗುವನ್ನು ರಾಮಕೃಷ್ಣ ವಾತ್ಸಲ್ಯ ಧಾಮ ದತ್ರು ಕೇಂದ್ರದಲ್ಲಿ ಆರೈಕೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
manglore latest crime news