ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಕಿಸ್ಸಿಂಗ್ ಪಂದ್ಯ.. ವಿಡಿಯೋ ವೈರಲ್ ಮಾಡಿದ ಯುವಕನ ವಿಚಾರಣೆ - ವಿದ್ಯಾರ್ಥಿಗಳ ವಿಡಿಯೋ ವೈರಲ್ ಮಾಡಿದ ಯುವಕನ ವಿಚಾರಣೆ

ಮಂಗಳೂರಲ್ಲಿ ಕಾಲೇಜೊಂದರ ವಿದ್ಯಾರ್ಥಿಗಳ ಲಿಪ್ ಲಾಕ್ ಪಂದ್ಯ- ವಿಡಿಯೋ ವೈರಲ್ ಮಾಡಿದ ಮತ್ತೋರ್ವ ವಿದ್ಯಾರ್ಥಿ- ಯುವಕನನ್ನು ವಶಕ್ಕೆ ಪಡೆದ ಪೊಲೀಸರು

student-detained-in-kissing-video-viral-case
ಮಂಗಳೂರಿನಲ್ಲಿ ಕಿಸ್ಸಿಂಗ್ ಪಂದ್ಯ: ವಿಡಿಯೋ ವೈರಲ್ ಮಾಡಿದ ಯುವಕನ ವಿಚಾರಣೆ

By

Published : Jul 21, 2022, 12:02 PM IST

Updated : Jul 21, 2022, 12:10 PM IST

ಮಂಗಳೂರು:ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಚುಂಬನದಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿರುವ ಸಂಬಂಧ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳೂರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಪಿಯುಸಿ ವಿದ್ಯಾರ್ಥಿಗಳ ವಿಡಿಯೋ ಇದಾಗಿದೆ ಎನ್ನಲಾಗ್ತಿದ್ದು, ಎಲ್ಲೆಡೆ ವೈರಲ್ ಆಗಿದೆ. ವಿದ್ಯಾರ್ಥಿಗಳ ನಡುವೆ ಕಿಸ್ಸಿಂಗ್ ಪಂದ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಇದರ ಪ್ರಕಾರ ಎಲ್ಲರೆದುರು ಕಿಸ್ ಮಾಡಬೇಕಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿ ಜೊತೆ ಕಿಸ್​​ ಮಾಡುವ ಈ ವಿಡಿಯೋ ಸೆರೆಹಿಡಿದು ವೈರಲ್ ಮಾಡಿರುವ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ:ಇನ್​ಸ್ಟಾಗ್ರಾಮ್​ನಲ್ಲಿ ತನ್ನ ಸಾವಿನ ದಿನಾಂಕ ಬರೆದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ!

Last Updated : Jul 21, 2022, 12:10 PM IST

ABOUT THE AUTHOR

...view details