ಕರ್ನಾಟಕ

karnataka

ETV Bharat / state

ತುಳುವಿನ ಎವರ್ ಗ್ರೀನ್ ಸಿನಿಮಾ ಗೀತೆ ಹಾಡಿದ ಪೊಲೀಸ್ ಕಮಿಷನರ್!

ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಮೊದಲ ಬಾರಿಗೆ 'ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ' ತುಳು ಹಾಡು ಹಾಡಿದ್ದು, ಈ ವಿಡಿಯೋವನ್ನು ಎರಡು ಗಂಟೆಯಲ್ಲಿ 2,400 ಮಂದಿ ವೀಕ್ಷಿಸಿದ್ದಾರೆ. 189 ಮಂದಿ ಶೇರ್ ಮಾಡಿದ್ದಾರೆ.

mangaluru
ತುಳು ಗೀತೆ ಹಾಡಿದ ಪೊಲೀಸ್ ಕಮೀಷನರ್

By

Published : Jun 18, 2021, 9:27 PM IST

ಮಂಗಳೂರು:ತುಳು ಸಿನಿಮಾಲೋಕದ ಎವರ್ ಗ್ರೀನ್ ಮೆಲೋಡಿ ಗೀತೆ 'ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ' ಹಾಡನ್ನು ಮಂಗಳೂರು ಪೊಲೀಸ್ ಕಮಿಷನರ್ ಹಾಡಿದ್ದು, ಇದರ ವಿಡಿಯೋ ಫೇಸ್​ಬುಕ್​​ನಲ್ಲಿ ಸದ್ದು ಮಾಡುತ್ತಿದೆ.

ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರು ಗಾಯನದ ಬಗ್ಗೆ ಒಲವುಳ್ಳವರು. ಅವರು ಹಾಡಿರುವ ಸಾಕಷ್ಟು ವಿಡಿಯೋಗಳು ವೈರಲ್ ಆಗಿ, ಸಾಕಷ್ಟು ಮಂದಿಯಿಂದ ಮೆಚ್ಚುಗೆ ಗಳಿಸಿತ್ತು. ಇದೀಗ ಅವರು ಮೊದಲ ಬಾರಿಗೆ‌ ತುಳು ಸಿನಿಮಾ ಗೀತೆಯನ್ನು ಹಾಡಿದ್ದಾರೆ.

ತುಳು ಗೀತೆ ಹಾಡಿದ ಪೊಲೀಸ್ ಕಮೀಷನರ್

ಮೂಲತಃ ಚಿತ್ರದುರ್ಗದವರಾದರೂ ತುಳುಭಾಷೆಯ ಸೊಗಡನ್ನು ಸ್ಪಷ್ಟವಾಗಿ ಮೂಡುವಂತೆ ಹಾಡಿದ್ದಾರೆ. 'ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ' ಹಾಡಿನ ವಿಡಿಯೋವನ್ನು ಎರಡು ಗಂಟೆಯಲ್ಲಿ 2400 ಮಂದಿ ವೀಕ್ಷಿಸಿದ್ದು, 189 ಮಂದಿ ಶೇರ್ ಮಾಡಿದ್ದಾರೆ. ಪೊಲೀಸ್ ಕಮಿಷನರ್ ಈ ಹಾಡಿಗೆ ಎಷ್ಟು ಮೋಡಿಯಾಗಿದ್ದಾರೆಂದರೆ ಅವರು ಆಂಗಿಕ ಚಲನೆ ಮಾಡುತ್ತಲೇ ಹಾಡಿರುವುದೇ ಅದಕ್ಕೆ ಸಾಕ್ಷಿ.

ಮೈತ್ರಿ ಫಿಲಂಸ್ ಮಂಗಳೂರು ನಿರ್ಮಾಣದ 1972ರಲ್ಲಿ ತೆರೆಕಂಡ ಪಗೆತಪುಗೆ ಸಿನಿಮಾದ 'ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ' ಹಾಡನ್ನು ಸಿನಿಮಾದಲ್ಲಿ ಎಸ್.ಪಿ‌.ಬಾಲಸುಬ್ರಹ್ಮಣ್ಯಂ ಹಾಡಿದ್ದು, ಮಾಧುರ್ಯಭರಿತ ಗೀತೆಗಳ ಸರದಾರರಾದ ರಾಜನ್-ನಾಗೇಂದ್ರ ಜೋಡಿ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ABOUT THE AUTHOR

...view details