ಮಂಗಳೂರು:ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋಗಾಗಿ ಬಾತ್ ರೂಂನಲ್ಲಿ ಮೊಬೈಲ್ ಇಟ್ಟ ಆರೋಪದಡಿ ಯುವಕನೊಬ್ಬನನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಮುಲ್ಕಿಯ ಪಕ್ಷಿಕೆರೆಯ ನಿವಾಸಿ ಸುಮಂತ್ ಪೂಜಾರಿ (22) ಬಂಧಿತ ಯುವಕ. ಆರೋಪಿ ಸುಮಂತ್ ಪೂಜಾರಿ ಪಕ್ಕದ ಮನೆಯ ಬಚ್ಚಲು ಮನೆಯಲ್ಲಿ ಮೊಬೈಲ್ ಇಟ್ಟಿದ್ದ ಎನ್ನಲಾಗಿದೆ. ಈತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕರೆಯಲ್ಲಿ ಈ ಘಟನೆ ನಡೆದಿದೆ.
ಪ್ರಕರಣದ ಸಂಪೂರ್ಣ ವಿವರ: ಆರೋಪಿಸುಮಂತ್ ಪೂಜಾರಿ ಯುವತಿಯ ಸ್ನಾನದ ವಿಡಿಯೋಗಾಗಿ ಮೊಬೈಲ್ ಇಟ್ಟಿದ್ದನಂತೆ. ಆದರೆ, ಯುವತಿಯ ಬದಲಾಗಿ ಯುವತಿಯ ಅಣ್ಣ ಬಚ್ಚಲು ಮನೆಗೆ ಸ್ನಾನಕ್ಕಾಗಿ ಹೋಗಿದ್ದಾರೆ. ಅಲ್ಲಿ ಮೊಬೈಲ್ ಇರುವುದನ್ನು ಅವರು (ಯುವತಿಯ ಅಣ್ಣ) ಗಮನಿಸಿದ್ದಾರೆ. ಈ ವೇಳೆ, ಸುಮಂತ್ ಯುವತಿಯ ಅಣ್ಣ ಪ್ರಜ್ವಲ್ ಕೈಗೆ ಸಿಕ್ಕಿಬಿದ್ದಿದ್ದಾನೆ. ಸುಮಂತ್ ವಿರುದ್ಧ ಪ್ರಜ್ವಲ್ ಮುಲ್ಕಿ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರು: ಪಿಜಿ ಯುವತಿಯರ ಸ್ನಾನದ ವಿಡಿಯೋ ಮಾಡಿ ಸಿಕ್ಕಿಬಿದ್ದ ಬ್ಯಾಂಕ್ ಉದ್ಯೋಗಿ
ಸಿಸಿಬಿ ಕಾರ್ಯಾಚರಣೆ - ಗಾಂಜಾ ಹೊಂದಿದ ವ್ಯಕ್ತಿ ಸೆರೆ: 'ಡ್ರಗ್ಸ್ ಫ್ರಿ ಮಂಗಳೂರು' ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ನಗರದ ಕೋಡಿಕಲ್ ಜೆಎಂ ರಸ್ತೆಯ ಮೊಹಮ್ಮದ್ ಅಝೀಝ್ ಯಾನೆ ಅಜೀಜ್ (40) ಬಂಧಿತ ಆರೋಪಿ.