ಕರ್ನಾಟಕ

karnataka

ETV Bharat / state

ಎರಡು ಕೈಗಳಿಂದ ಏಕಕಾಲದಲ್ಲಿ 2 ಭಾಷೆ ಮತ್ತು 20 ವಿಭಿನ್ನ ಬಗೆಗಳಲ್ಲಿ ಬರೆಯಬಲ್ಲ ಪ್ರತಿಭಾವಂತೆ ಈ ಆದಿಸ್ವರೂಪ - swaroopa Form Studies in mangaluru

ಮಂಗಳೂರಿನ ಆದಿಸ್ವರೂಪ ಅವರು ಎರಡು ಕೈಗಳಲ್ಲಿ ಏಕಕಾಲದಲ್ಲಿ 20 ವಿಭಿನ್ನ ಬಗೆಯಲ್ಲಿ ಬರೆಯುತ್ತಾರೆ. ಜೊತೆಗೆ ಮಲಯಾಳಂ, ಹಿಂದಿ, ಪ್ರೆಂಚ್, ಕೊರಿಯನ್​ ಬಾಷೆಗಳಲ್ಲು ಸಹ ಬರೆಯುತ್ತಾರೆ.​

mangaluru-girl-write-in-20-different-languages-with-both-hands
ಎರಡು ಕೈಗಳಲ್ಲಿ ಭಿನ್ನ ಭಾಷೆಯಲ್ಲೂ, 20 ಬಗೆಯಲ್ಲಿ ಬರೆಯಬಲ್ಲ ಪ್ರತಿಭಾವಂತೆ ಆದಿಸ್ವರೂಪ

By

Published : Mar 7, 2023, 8:36 PM IST

ಎರಡು ಕೈಗಳಲ್ಲಿ ಭಿನ್ನ ಭಾಷೆಯಲ್ಲೂ, 20 ಬಗೆಯಲ್ಲಿ ಬರೆಯಬಲ್ಲ ಪ್ರತಿಭಾವಂತೆ ಆದಿಸ್ವರೂಪ

ಮಂಗಳೂರು:ಎರಡು ಕೈಗಳಲ್ಲಿ ಏಕಕಾಲದಲ್ಲಿ ಬರೆಯುವ ಮೂಲಕ ಎಕ್ಸ್​ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ ಆದಿಸ್ವರೂಪ ಇದೀಗ ಎರಡು ಭಿನ್ನ ಭಾಷೆಗಳನ್ನು ಏಕಕಾಲದಲ್ಲಿ ಬರೆಯುವ ಮತ್ತು 20 ವಿಭಿನ್ನ ಬಗೆಯಲ್ಲಿ ಬರೆಯುವ ವಿಶಿಷ್ಟ ಸಾಧನೆ ಮಾಡುತ್ತಿದ್ದಾರೆ.

ಈ ಹಿಂದೆ ಆದಿಸ್ವರೂಪ ಅವರು ಎರಡು ಕೈಗಳಲ್ಲಿ ಏಕಕಾಲದಲ್ಲಿ ಬರೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆರಂಭದಲ್ಲಿ ಹತ್ತು ವಿಭಿನ್ನ ಬಗೆಯಲ್ಲಿ ಎರಡು ಕೈಗಳಲ್ಲಿ ಬರೆಯುತ್ತಿದ್ದ ಆದಿಸ್ವರೂಪ ಇದೀಗ ಇಪ್ಪತ್ತು ವಿಭಿನ್ನ ಬಗೆಯಲ್ಲಿ ಏಕಕಾಲದಲ್ಲಿ ಬರೆಯುತ್ತಾರೆ. ಅವುಗಳೆಂದರೆ ಯುನಿಡೈರೆಕ್ಸನ್,‌ ಒಪೊಸಿಟ್ ಡೈರೆಕ್ಸನ್, ರೈಟ್​ಹ್ಯಾಂಡ್ , ಲೆಪ್ಟ್​ಹ್ಯಾಂಡ್ , ಮಿರರ್ ಇಮೇಜ್, ಎಕ್ಸ್​ಚೇಂಜ್, ಹೆಟೆರೋ ಟಾಪಿಕ್, ಹೆಟೆರೋ ಲಿಂಗ್ವಿಸ್ಟಿಕ್ಸ್, ಡ್ಯಾನ್ಸಿಂಗ್, ಬ್ಲೈಂಡ್ ಪೋಲ್ಡ್, ರಿವರ್ಸ್ ಲೆಪ್ಟ್ ಹ್ಯಾಂಡ್, ರಿವರ್ಸ್ ಬೋತ್ ಹ್ಯಾಂಡ್, ರೈಟಿಂಗ್ ವಿದ್ ಸಾಂಗ್, ಕನ್ನಡ ,ಮಲಯಾಳ, ತುಳು, ಹಿಂದಿ, ಕೊರಿಯನ್, ಪ್ರೆಂಚ್ ,ಡ್ರಾಯಿಂಗ್.

ಈ ರೀತಿಯ ವಿಭಿನ್ನ ಬಗೆಯ ಸಾಧನೆ ಮಾಡಿರುವ ಆದಿಸ್ವರೂಪ ಎರಡು ಕೈಗಳಲ್ಲಿ ಎರಡು ಭಾಷೆಯನ್ನು ಏಕಕಾಲದಲ್ಲಿ ಬರೆಯುವ ಸಾಧನೆ ಮಾಡುತ್ತಿದ್ದಾರೆ. ಕನ್ನಡ-ಇಂಗ್ಲಿಷ್, ಮಲಯಾಳಂ-ತುಳು, ಪ್ರೆಂಚ್-ಕೊರಿಯನ್, ಹಿಂದಿ-ಇಂಗ್ಲಿಷ್ ಭಾಷೆಗಳಲ್ಲಿ ಬರೆಯುವ ಸಾಧನೆ ಮಾಡುತ್ತಿದ್ದಾರೆ. ಒಂದೂವರೆ ವರ್ಷದಿಂದ ಈ ಅಭ್ಯಾಸ ಮಾಡಿ ಇದೀಗ ಅದರಲ್ಲಿಯೂ ಪರಿಣತಳಾಗಿದ್ದಾರೆ.

ಈವರೆಗೆ ಐದು ರೆಕಾರ್ಡ್:ಮಂಗಳೂರು ನಗರದ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್, ಸುಮಾಡ್ಕರ್ ದಂಪತಿಯ ಪುತ್ರಿ ಆದಿಸ್ವರೂಪ ಅವರು ಈವರೆಗೆ ಐದು ರೆಕಾರ್ಡ್​ಗಳನ್ನು ಮಾಡಿದ್ದಾರೆ. ಈಕೆ ಮೊದಲು ರುಬಿಕ್ ಕ್ಯೂಬ್ ಮೊಸೈಕ್​ನಲ್ಲಿ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಎರಡು ಕೈಗಳಲ್ಲಿ ಏಕಕಾಲದಲ್ಲಿ ಒಂದು ನಿಮಿಷದಲ್ಲಿ 45 ಪದಗಳನ್ನು ಬರೆದು ಎಕ್ಸ್​ಕ್ಲೂಸಿವ್ ವರ್ಲ್ಡ್ ರೆಕಾರ್ಡ್, ಎಸ್​ಎಸ್​ಎಲ್​ಸಿಯ ಸಂಪೂರ್ಣ ಪಠ್ಯವನ್ನು ವಿಸ್ಯುವಲ್ ಆರ್ಟ್ ಮೂಲಕ ಒಂದೇ ಚಿತ್ರದಲ್ಲಿ ‘‘ಇನ್ ಕ್ರೆಡಿಬಲ್ ವಿಸ್ಯುವಲ್ ಮೆಮೊರಿ ಆರ್ಟಿಸ್ಟ್ ರೆಕಾರ್ಡ್’’, 2022ರಲ್ಲಿ ಎರಡು ಕೈಗಳಲ್ಲಿ ಏಕಕಾಲದಲ್ಲಿ ಒಂದು ನಿಮಿಷದಲ್ಲಿ 60 ಪದಗಳನ್ನು ಬರೆದು ವರ್ಲ್ಡ್ ರೆಕಾರ್ಡ್, ಒಂದು ನಿಮಿಷದಲ್ಲಿ ಮಿರರ್ ಇಮೇಜ್​ನಲ್ಲಿ 188 ಪದಗಳನ್ನು ಬರೆದು ಇಂಟರ್ ನ್ಯಾಷನಲ್ ಬುಕ್ ಅಫ್ ರೆಕಾರ್ಡ್ ಪಡೆದಿದ್ದಾರೆ.

ಆದಿಸ್ವರೂಪ ಅವರು ಹತ್ತನೆ ವಯಸ್ಸಿನಲ್ಲಿ ‘ಆದಿಯ ಕತೆ ಅಂತ್ಯ ನೀವೇ ಹೇಳಿ’ ಎಂಬ ಎರಡು ಭಾಷೆಯಲ್ಲಿ ಫ್ಯಾಂಟಸಿ ಕತೆಗಳು, ಚಿತ್ರಗಳು ಬರೆದು ಮೆಚ್ಚುಗೆ ಗಳಿಸಿದ್ದರು. ಗಿಟಾರ್ ಹಾಗೂ ಕೀಬೋರ್ಡ್ ನುಡಿಸುವ ಅವರು ಉತ್ತಮ ಹಾಡುಗಾರ್ತಿ ಕೂಡ ಆಗಿದ್ದಾರೆ.

ಇನ್ನೂ ಹೆಚ್ಚು ರೆಕಾರ್ಡ್​ಗಳನ್ನು ಮಾಡುವ ಗುರಿ: ಈ ಬಗ್ಗೆ ಮಾತನಾಡಿದ ಆದಿಸ್ವರೂಪ, ‘‘ನನಗೆ ಸ್ವರೂಪ ಅಧ್ಯಯನ ಕೇಂದ್ರದ ಮೂಲಕ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಶಾಲೆಗೆ ಹೋಗದೇ ಶಾಲೆಯಲ್ಲಿ ಕಲಿಯಬೇಕಾದದ್ದನ್ನು ಸ್ವರೂಪ ಅಧ್ಯಯನ ಕೇಂದ್ರದಿಂದ ವಿಸ್ಯುವಲ್ ಆರ್ಟ್ ಮೂಲಕ ಕಲಿತಿದ್ದೇನೆ. ಈಗಾಗಲೇ 5 ವರ್ಲ್ಡ್ ರೆಕಾರ್ಡ್ ಮಾಡಿದ್ದು, ಇನ್ನೂ ಹೆಚ್ಚು ರೆಕಾರ್ಡ್​ಗಳನ್ನು ಮಾಡುವ ಉದ್ದೇಶವಿದೆ. ಕನ್ನಡ, ಮಲಯಾಲಂ, ಹಿಂದಿ, ಇಂಗ್ಲೀಷ್ ಮಾತ್ರವಲ್ಲದೇ ವಿದೇಶಿ ಭಾಷೆಯಾದ ಪ್ರೆಂಚ್ ಮತ್ತು ಕೊರಿಯನ್ ಭಾಷೆಯನ್ನು ಕಲಿಯುತ್ತಿದ್ದೇನೆ ಎನ್ನುತ್ತಾರೆ.

ಆದಿಸ್ವರೂಪ ತಾಯಿ ಸುಮಾಡ್ಕರ್ ಅವರು ಮಾತನಾಡಿ, ‘‘ಆದಿ ತನ್ನ ಆಸಕ್ತಿಯಿಂದಲೇ ಹೊಸ ಹೊಸತನ್ನು ಕಲಿಯುವ ಉತ್ಸಾಹ ಹೊಂದಿದ್ದಾಳೆ. ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಕಲಿತು ಆಕೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ. ಒಟ್ಟಿನಲ್ಲಿ ಆದಿಸ್ವರೂಪ ಇತರ ವಿದ್ಯಾರ್ಥಿನಿಯರಂತೆ ಸಿದ್ದ ಪಠ್ಯವನ್ನು ಕಲಿಯದೆ ಹೊಸ ಮಾದರಿಯ ಮೂಲಕ ಸಾಧನೆ ಮಾಡಿದ್ದಾರೆ. ಪಿಯುಸಿಯನ್ನು ಅಂಚೆ ತೆರಪಿನ ಮೂಲಕ ಕಲಿಯುವ ಈಕೆ ಹೊಸ ಹೊಸ ಸಾಧನೆಗಳನ್ನು ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ಕಾರವಾರದಲ್ಲಿ ಸಂಭ್ರಮದ ಹೋಳಿ ಆಚರಣೆ, ಬಣ್ಣದಲ್ಲಿ ಮಿಂದೆದ್ದ ಜನತೆ

ABOUT THE AUTHOR

...view details