ಮಂಗಳೂರು:ನಗರದ ತೋಟ ಬೇಂಗ್ರೆ ಎಂಬಲ್ಲಿ ನಿನ್ನೆ ರಾತ್ರಿ ಮನೆಯೊಂದರ ಬಳಿ ಕಂಡ ನಾಗರಹಾವೊಂದನ್ನು ಹಿಡಿದು ಸುರಕ್ಷಿತವಾಗಿ ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಯಿತು.
ಮನೆಗೆ ಬಂದ ನಾಗರ ಸುರಕ್ಷಿತವಾಗಿ ಪಿಲಿಕುಳ ನಿಸರ್ಗಧಾಮಕ್ಕೆ.. - ತೋಟ ಬೇಂಗ್ರೆ ಬಳಿ ನಾಗರಹಾವು ಸೆರೆ
ಮಂಗಳೂರಿನ ತೋಟ ಬೇಂಗ್ರೆ ಎಂಬಲ್ಲಿನ ಮನೆಯೊಂದರ ಶೌಚಾಲಯದ ಬದಿ ಅವಿತಿದ್ದ ನಾಗರಹಾವೊಂದನ್ನು ಹಿಡಿದು ಸುರಕ್ಷಿತವಾಗಿ ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಗಿದೆ.
ತೋಟ ಬೇಂಗ್ರೆ ಬಳಿ ನಾಗರಹಾವು ಸೆರೆ
ತೋಟ ಬೇಂಗ್ರೆಯ ಮನೆಯೊಂದರ ಅಂಗಳದಲ್ಲಿ ನಿನ್ನೆ ರಾತ್ರಿ 7.30ರ ಹೊತ್ತಿಗೆ ನಾಗರಹಾವೊಂದು ಬಂದಿತ್ತು. ಮನೆಯಲ್ಲಿ ತಾಯಿ-ಮಗಳು ಇಬ್ಬರೇ ಇರುವುದರಿಂದ ಭಯಭೀತರಾಗಿದ್ದರು. ವಿಕಿತ್ ಎಂಬ ಸ್ಥಳೀಯ ಯುವಕ ತಕ್ಷಣವೇ ಹಿಡಿಯಲು ಪ್ರಯತ್ನಿಸಿದರೂ ಜನಕ್ಕೆ ಹೆದರಿದ ಹಾವು ಶೌಚಾಲಯದ ಬದಿ ಅವಿತಿತ್ತು.
ಉರಗ ತಜ್ಞ ಗಂಗೇಶ್ ಬೋಳಾರ್ ಅವರು ಸ್ಥಳಕ್ಕೆ ಬಂದು ನಾಗರಹಾವನ್ನು ಸೆರೆಹಿಡಿದು ಸುರಕ್ಷಿತವಾಗಿ ಪಿಲಿಕುಳ ನಿಸರ್ಗಧಾಮದಲ್ಲಿ ಬಿಟ್ಟಿದ್ದಾರೆ. ಸುಮಾರು ಐದು ಅಡಿ ಉದ್ದದ ಈ ನಾಗರಹಾವು 10-15 ವರ್ಷ ಪ್ರಾಯದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.