ಚೆನ್ನೈ(ತಮಿಳುನಾಡು):ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯ ಭಾಗವಾಗಿ ಕರ್ನಾಟಕ ಪೊಲೀಸರ ವಿಶೇಷ ತಂಡ ತಮಿಳುನಾಡಿನ ಹಲವು ಸ್ಥಳಗಳಲ್ಲಿ ಇಂದು ಶೋಧ ಕಾರ್ಯಾಚರಣೆ ನಡೆಸಿದೆ. ಅಲ್ಲದೇ, ಹಲವು ಶಂಕಿತ ವ್ಯಕ್ತಿಗಳಿಗೆ ಸಮನ್ಸ್ ನೀಡಿದೆ. ಶಂಕಿತ ಉಗ್ರ ಮೊಹಮ್ಮದ್ ಶಾರಿಕ್ ಪ್ರಯಾಣದ ಜಾಡು ಪತ್ತೆ ಮಾಡಲಾಗುತ್ತಿದೆ.
ಸ್ಫೋಟಕ್ಕೂ ಮೊದಲು ಶಾರಿಕ್ ತಂಗಿದ್ದ ಕೊಯಮತ್ತೂರಿನ ಭವನದ ಮಾಲೀಕ ಕಾಮರಾಜುಗೆ ಸಮನ್ಸ್ ನೀಡಲಾಗಿದೆ. ಶಾರಿಕ್ ನಕಲಿ ಗುರುತನ್ನು ಬಳಸಿ ಭವನದಲ್ಲಿ ತಂಗಿರುವುದು ತಿಳಿದುಬಂದಿದೆ. ಹೀಗಾಗಿ ಮೂರು ದಿನಗಳ ಒಳಗೆ ಮಂಗಳೂರು ಪೊಲೀಸರ ಮುಂದೆ ಭವನದ ಮಾಲೀಕರು ವಿಚಾರಣೆಗೆ ಹಾಜರಾಗಲು ಸೂಚಿಸಿ ಸಮನ್ಸ್ ಜಾರಿ ಮಾಡಲಾಗಿದೆ.
ಮಧುರೈನ ನೇತಾಜಿ ರಸ್ತೆಯಲ್ಲಿರುವ ಲಾಡ್ಜ್‌ನ ಮ್ಯಾನೇಜರ್‌ನನ್ನೂ ಪೊಲೀಸರು ಈ ವೇಳೆ ವಿಚಾರಣೆ ನಡೆಸಿದ್ದಾರೆ. ಆರೋಪಿಯ ಫೋನ್ ಕರೆಗಳನ್ನು ಟ್ರ್ಯಾಕ್ ಮಾಡಲಾಗಿದ್ದು, ಲಾಡ್ಜ್ನಲ್ಲಿ ಉಳಿದು ಕರೆ ಮಾಡಿರುವುದು ದೃಢಪಟ್ಟಿದೆ.