ಕರ್ನಾಟಕ

karnataka

ETV Bharat / state

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿರೋ ಬಹುತೇಕ ಚಿನ್ನ ದುಬೈನದು..! - ಕಸ್ಟಂ ಅಧಿಕಾರಿಗಳಿಂದ ಅಕ್ರಮ ಚಿನ್ನ ಸಾಗಣೆ ಪತ್ತೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗುವ ಬಹುತೇಕ ಚಿನ್ನ ದುಬೈ ಮೂಲದಿಂದ ಬರುತ್ತಿದೆ ಎಂದು ಇತ್ತೀಚಿನ ಅಂಕಿ ಅಂಶಗಳು ಬಹಿರಂಗಪಡಿಸಿವೆ.

mangaluru-airport-custom-officers-operations
ಮಂಗಳೂರಿನಲ್ಲಿ ದುಬೈ ಚಿನ್ನ

By

Published : Dec 30, 2020, 3:18 AM IST

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಅಕ್ಟೋಬರ್ 27 ರಿಂದ ಡಿಸೆಂಬರ್ 27ರವರೆಗೆ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟವನ್ನು ಪತ್ತೆ ಮಾಡಿದ್ದಾರೆ.

ಅಧಿಕಾರಿಗಳು ಜಪ್ತಿ ಮಾಡಿರುವ ಚಿನ್ನ

ಕೆಲವು ದಿನಗಳ ಹಿಂದೆ ದುಬೈನಿಂದ ಬರುವ ಇಂಡಿಗೋ ಫ್ಲೈಟ್​​ನಲ್ಲಿ ಕಾಸರಗೋಡು ಮೂಲದ ವ್ಯಕ್ತಿ ಅಕ್ರಮವಾಗಿ ತಂದಿದ್ದ 17,82,960 ಲಕ್ಷ ರೂ. ಮೌಲ್ಯದ 349.60 ಗ್ರಾಂ ಚಿನ್ನ, ದುಬೈನಿಂದ ಬಂದಿದ್ದ ಸ್ಪೈಸ್ ಜೆಟ್ ಫ್ಲೈಟ್​ನಲ್ಲಿ ಭಟ್ಕಳ ಮೂಲದ ವ್ಯಕ್ತಿ ತಂದಿರುವ 18,31,746 ಲಕ್ಷ ರೂ. ಮೌಲ್ಯದ 360.580 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದರು.

ಇದನ್ನೂ ಓದಿ:ಮುಂಬೈ ಏರ್​ಪೋರ್ಟ್​​ನಲ್ಲಿ ಚಿನ್ನ ಸಾಗಿಸುತ್ತಿದ್ದ ಆರೋಪದಲ್ಲಿ ಮಹಿಳೆ ಬಂಧನ

ಇದಾದ ನಂತರ ದುಬೈನಿಂದ ಬಂದಿದ್ದ ಸ್ಪೈಸ್ ಜೆಟ್ ಫ್ಲೈಟ್​ನಲ್ಲಿ ಭಟ್ಕಳ ಮೂಲದ ವ್ಯಕ್ತಿ ತಂದಿದ್ದ 13,26,120 ಲಕ್ಷ ರೂ. ಮೌಲ್ಯದ 257.900 ಗ್ರಾಂ ಚಿನ್ನ, ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್​ನಲ್ಲಿ ಆಗಮಿಸಿದ್ದ ಮಹಾರಾಷ್ಟ್ರ ರಾಜ್ಯದ ಉಲ್ಲಾಸ್ ನಗರ ಜಿಲ್ಲೆಯ ಮೂಲದ ವ್ಯಕ್ತಿ ತಂದಿದ್ದ 5,14,500 ಲಕ್ಷ ರೂ. ಮೌಲ್ಯದ 98 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದರು.

ಅದಲ್ಲದೇ ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್​ನಲ್ಲಿ ಕಾಸರಗೋಡು ಮೂಲದ ವ್ಯಕ್ತಿ ಅಕ್ರಮವಾಗಿ ತಂದಿದ್ದ 5,02,920 ಲಕ್ಷ ರೂ. ಮೌಲ್ಯದ 99 ಗ್ರಾಂ ಚಿನ್ನ, ಶಾರ್ಜಾದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್​​ನಲ್ಲಿ ಬಂದಿದ್ದ ಕಾಸರಗೋಡು ಮೂಲದ ವ್ಯಕ್ತಿ ತಂದಿದ್ದ 9,64,844 ರೂ. ಮೌಲ್ಯದ 189.930 ಗ್ರಾಂ ಅಕ್ರಮ ಚಿನ್ನವನ್ನು ಕಸ್ಟಂ ಅಧಿಕಾರಿಗಳ ತಂಡ ಪತ್ತೆ ಹಚ್ಚಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details