ಕರ್ನಾಟಕ

karnataka

ETV Bharat / state

ಮಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ.. ಆರೋಪಿ ಪರಾರಿ - murder case accused escape

ದೇವಸ್ಯ ನಿವಾಸಿ ಶಾಂತಪ್ಪ ಗೌಡ ಎಂಬ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

man accused of murder was escape
ಕೊಲೆ

By

Published : Jan 13, 2022, 2:53 PM IST

ನೆಲ್ಯಾಡಿ (ದಕ್ಷಿಣ ಕನ್ನಡ):ವಿಮಾ ಪ್ರತಿನಿಧಿಯಾಗಿದ್ದ ಕೃಷಿಕರೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಕಡಬ ತಾಲೂಕಿನ ಉದನೆ ಸಮೀಪದ ರೇಖ್ಯ ನೇಲ್ಯಡ್ಕದ ದೇವಸ್ಯ ಎಂಬಲ್ಲಿ ನಡೆದಿದೆ.

ಶಾಂತಪ್ಪ ಗೌಡ ಕೊಲೆಯಾದ ವ್ಯಕ್ತಿ

ದೇವಸ್ಯ ನಿವಾಸಿ ಶಾಂತಪ್ಪ ಗೌಡ (40) ಕೊಲೆಯಾದ ವ್ಯಕ್ತಿ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿರಬಹುದು ಎಂಬ ಮಾಹಿತಿ ಲಭಿಸಿದೆ. ಆರೋಪಿ ಎನ್ನಲಾದ ಜಯಚಂದ್ರ ಎಂಬಾತ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ನಾಯಿ - ಬೆಕ್ಕುಗಳಿಗೆ ವಿಷ ಪ್ರಾಶನ ಮಾಡಿ ಹರಣ ಆರೋಪ.. ವ್ಯಕ್ತಿಯ ವಿರುದ್ಧ ಮಂಗಳೂರು ಠಾಣೆಯಲ್ಲಿ ದೂರು ದಾಖಲು

ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಮೃತದೇಹವನ್ನು ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.

ABOUT THE AUTHOR

...view details