ಕರ್ನಾಟಕ

karnataka

ETV Bharat / state

ಮಂಗಳೂರು ವಿವಿ: ಎನ್ಇಪಿ ಮೊದಲ ಸೆಮಿಸ್ಟರ್ ಫಲಿತಾಂಶ ಪ್ರಕಟ - ವಿದ್ಯಾರ್ಥಿಗಳಿಂದ ಬೃಹತ್​ ಪ್ರತಿಭಟನೆ

ಮಂಗಳೂರು ವಿವಿಯಿಂದ ಎನ್​ಇಪಿ ಮೊದಲ ಸೆಮಿಸ್ಟರ್​ ಫಲಿತಾಂಶ ಪ್ರಕಟ- ಡಿಸೆಂಬರ್​ 24ರಂದೇ ಫಲಿತಾಂಶ ಪ್ರಕಟಿಸಿದ ಆಡಳಿತ ಮಂಡಳಿ- ಸದರಿ ಸೆಮಿಸ್ಟರ್​ಗಳ ಫಲಿತಾಂಶ ಜನವರಿ 20ರಂದು ಪ್ರಕಟ

Mangalore University announce  University announced NEP first semester result  announced NEP first semester result  ಎನ್ಇಪಿ ಮೊದಲ ಸೆಮಿಸ್ಟರ್ ಫಲಿತಾಂಶ ಪ್ರಕಟ  ಮಂಗಳೂರು ವಿವಿಯಿಂದ ಎನ್​ಇಪಿ ಮೊದಲ ಸೆಮಿಸ್ಟರ್​ ಸದರಿ ಸೆಮಿಸ್ಟರ್​ಗಳ ಫಲಿತಾಂಶ ಜನವರಿ 20ರಂದು ಪ್ರಕಟ  ಎನ್ಇಪಿ ಮೊದಲ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ  ಯುಯುಸಿಎಂಎಸ್ ಪೋರ್ಟಲ್​ನಲ್ಲಿ ಪ್ರಕಟ  ವಿದ್ಯಾರ್ಥಿಗಳಿಂದ ಬೃಹತ್​ ಪ್ರತಿಭಟನೆ  ಸದನದಲ್ಲಿ ಫಲಿತಾಂಶ ಗದ್ದಲ
ಎನ್ಇಪಿ ಮೊದಲ ಸೆಮಿಸ್ಟರ್ ಫಲಿತಾಂಶ ಪ್ರಕಟ

By

Published : Dec 28, 2022, 7:29 AM IST

ಮಂಗಳೂರು:ಮಂಗಳೂರು ವಿಶ್ವವಿದ್ಯಾನಿಲಯದ ಎನ್ಇಪಿ ಮೊದಲ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು ಡಿಸೆಂಬರ್ 24, 2022 ರಂದು ಯುಯುಸಿಎಂಎಸ್ ಪೋರ್ಟಲ್​ನಲ್ಲಿ ಪ್ರಕಟಿಸಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಕಟನೆ ತಿಳಿಸಿದೆ.

ಸಮಸ್ಯೆಯಿರುವ ಉಳಿಕೆಯಾದ ಫಲಿತಾಂಶವನ್ನು ಡಿಸೆಂಬರ್ 29 ರಂದು ಪ್ರಕಟಿಸಲಾಗುವುದು. ಮೌಲ್ಯಮಾಪನ ಕಾರ್ಯವು ಹಂತಹಂತವಾಗಿ ಪೂರ್ಣಗೊಳ್ಳುತ್ತಿದ್ದು, ಈಗಾಗಲೇ ಸ್ನಾತಕ ಪದವಿಯ 6ನೇ ಸೆಮಿಸ್ಟರ್​ನ ಫಲಿತಾಂಶ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದೆ.

ತರಗತಿಗಳ ನಡುವೆಯೇ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್​ನ ಮೌಲ್ಯಮಾಪನ ಕಾರ್ಯ ನಡೆಸಲಾಗುತ್ತಿದ್ದು, ಸದರಿ ಸೆಮಿಸ್ಟರ್​ಗಳ ಫಲಿತಾಂಶವನ್ನು ಜನವರಿ 20, 2023 ರ ಒಳಗೆ ಪ್ರಕಟಿಸಲಾಗುವುದು ಎಂದು ಕುಲಸಚಿವರ (ಪರೀಕ್ಷಾಂಗ) ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿಗಳಿಂದ ಬೃಹತ್​ ಪ್ರತಿಭಟನೆ: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಫಲಿತಾಂಶ ವಿಳಂಬ ಖಂಡಿಸಿ ಕೊಣಾಜೆ ಮಂಗಳೂರು ವಿವಿ ಆಡಳಿತ ಕಚೇರಿಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆ ಈ ಹಿಂದೆ ನಡೆದಿತ್ತು. ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಗೆ ಎಬಿವಿಪಿ ಕಾರ್ಯಕರ್ತರು ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆಹಿಡಿದಿದ್ದರು.

ಮಂಗಳೂರು ವಿಶ್ವವಿದ್ಯಾಲಯವು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೆ ಸತಾಯಿಸುತ್ತಿದೆ. ಅಂಕಪಟ್ಟಿ ಬಾರದೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಅವಕಾಶ ಸಿಗುತ್ತಿಲ್ಲ. ಮೌಲ್ಯಮಾಪನವನ್ನು ಸೂಕ್ತ ಸಮಯದಲ್ಲಿ ನಡೆಸದಿರುವುದು ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಅಲ್ಲದೆ ಎನ್‌ಇಪಿ ಜಾರಿಯಾದ ನಂತರ ಮೊದಲನೇ ವರ್ಷಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳು ಪ್ರಸ್ತುತ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್​ನ ಫಲಿತಾಂಶವನ್ನು ನೀಡಿದಿಲ್ಲ. ಈ ಸಮಸ್ಯೆಗೆ ಮಂಗಳೂರು ವಿವಿಯ ಕುಲಪತಿ ಹಾಗೂ ಪರೀಕ್ಷಾಂಗ ಕುಲಸಚಿವರು ಕಾರಣ ಎಂದು ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ ಹರ್ಷಿತ್ ಕೊಯ್ಲ ಈ ಹಿಂದೆ ಆರೋಪಿಸಿದ್ದರು.

ಆಗ ವಿದ್ಯಾರ್ಥಿಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್. ಧರ್ಮ ಅವರು, ವಿದ್ಯಾರ್ಥಿಗಳು ಫಲಿತಾಂಶ ವಿಳಂಬಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡುತ್ತಿದೆ. ಕೆಲವು ತಾಂತ್ರಿಕ ದೋಷಗಳಿಂದ ಈ ರೀತಿಯಾಗಿದೆ. ಈ ಬಗ್ಗೆ ಪರೀಕ್ಷಾಂಗ ಕುಲಸಚಿವರ ರಾಜೀನಾಮೆ ಆಗ್ರಹಿಸುತ್ತಿದ್ದು, ಒಂದು ವೇಳೆ ನನ್ನಿಂದ ಸಮಸ್ಯೆ ಆಗಿದ್ದರೆ ಇದರ ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಲು ಸಿದ್ಧನಾಗಿಯೇ ಬಂದಿದ್ದೇನೆ ಎಂದು ಹೇಳಿದ್ದರು.

ಜ.25ರೊಳಗೆ ಫಲಿತಾಂಶ ಪ್ರಕಟ : ಇನ್ನು, ವಿದ್ಯಾರ್ಥಿಗಳು ವಾಸ್ತವ ಅರ್ಥಮಾಡಿಕೊಂಡಿಲ್ಲ. ಒಂದು ದಿನವೂ ರಜೆ ಹಾಕದೆ ವಿವಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಯುಸಿಎಂಎಸ್​ನದ್ದೇ ನಮಗೆ ಸಮಸ್ಯೆ ಆಗಿರುವುದು. ಸರ್ವರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರದ ವಿರುದ್ಧ ನಾನು ಮಾತನಾಡುತ್ತಿಲ್ಲ. ವ್ಯವಸ್ಥೆ ವಿರುದ್ಧ ಮಾತನಾಡುತ್ತಿದ್ದೇನೆ. ಜನವರಿ 25ರ ಒಳಗಡೆ ಫಲಿತಾಂಶ ಪ್ರಕಟಣೆಗೆ ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ಕುಲಸಚಿವರು ಭರವಸೆ ನೀಡಿದ್ದರು. ಭರವಸೆಯಂತೆ ಡಿಸೆಂಬರ್​ 24ಕ್ಕೆ ಯುಸಿಎಂಎಸ್​ ಪೋರ್ಟಲ್​ನಲ್ಲಿ ಪ್ರಕಟಗೊಂಡಿದೆ.

ಸದನದಲ್ಲಿ ಫಲಿತಾಂಶ ಗದ್ದಲ:ಮಂಗಳೂರು ವಿಶ್ವವಿದ್ಯಾನಿಲಯದ ಫಲಿತಾಂಶ 10 ದಿನದೊಳಗೆ ಪ್ರಕಟ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ವಿಧಾನಸಭೆಯಲ್ಲಿ ಕೆಲ ದಿನಗಳ ಹಿಂದೆ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಪ್ರಶೋತ್ತರ ಅವಧಿ ವೇಳೆ ವಿರೋಧ ಪಕ್ಷದ ಉಪ ನಾಯಕ ಯು.ಟಿ ಖಾದರ್ ಈ ವಿಚಾರವನ್ನು ಪ್ರಸ್ತಾಪ ಮಾಡಿ, ಫಲಿತಾಂಶ ವಿಳಂಬದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ. ಮಂಗಳೂರು ವಿವಿಯಲ್ಲಿ ಮೊದಲ ಸೆಮಿಸ್ಟರ್ ಫಲಿತಾಂಶ ಇನ್ನೂ ಪ್ರಕಟಗೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ‌. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ.‌ ಫಲಿತಾಂಶ ಪ್ರಕಟಕ್ಕೆ ತಡ ಮಾಡಿದರೆ ವಿಶ್ವವಿದ್ಯಾನಿಲಯ ಹೇಗೆ ನಡೆಯಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೇರೆ ವಿಶ್ವವಿದ್ಯಾಲಯದಲ್ಲಿ ಫಲಿತಾಂಶ ಪ್ರಕಟವಾಗಿದೆ, ಮಂಗಳೂರು ವಿವಿಯಲ್ಲಿ ಮಾತ್ರ ತಡೆ ಏಕೆ?. ಫಲಿತಾಂಶ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ, ಇನ್ನು 10 ದಿನದೊಳಗೆ ಮಂಗಳೂರು ವಿವಿ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಮಾತು ನೀಡಿ ಎರಡ್ಮೂರು ದಿನದೊಳಗೆ ಮೊದಲ ಸೆಮಿಸ್ಟರ್​ ಫಲಿತಾಂಶ ಪ್ರಕಟಗೊಂಡಿದೆ.

ಓದಿ:ಸ್ಥಳೀಯರನ್ನು ಕಡೆಗಣಿಸಿ ಹೊರ ಜಿಲ್ಲೆಯವರಿಗೆ ಉದ್ಯೋಗ: ಮಂಗಳೂರು ವಿವಿ ವಿರುದ್ಧ ಆಕ್ರೋಶ

ABOUT THE AUTHOR

...view details