ಮಂಗಳೂರು: ನಗರದ ಕೇಂದ್ರ ಮಾರುಕಟ್ಟೆಯ ಅಂಗಡಿಯೊಂದರ ಮುಂಭಾಗ ಅಪರಿಚಿತ ವ್ಯಕ್ತಿವೋರ್ವನ ಮೃತದೇಹ ಪತ್ತೆಯಾಗಿದೆ.
ಮಂಗಳೂರು ಕೇಂದ್ರ ಮಾರುಕಟ್ಟೆ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ - ಮಂಗಳೂರು, ಕೇಂದ್ರ ಮಾರುಕಟ್ಟೆ, ಅಪರಿಚಿತ ವ್ಯಕ್ತಿಯ ಶವ ಪತ್ತೆ, ವೆನ್ಲಾಕ್ ಆಸ್ಪತ್ರೆ, ಬಂದರು ಠಾಣೆ ಪೊಲೀಸರು, ಕನ್ನಡ ವಾರ್ತೆ, ಈಟಿವಿ ಭಾರತ
ಮಂಗಳೂರು ನಗರದ ಕೇಂದ್ರ ಮಾರುಕಟ್ಟೆ ಆವರಣದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಕೇಂದ್ರ ಮಾರುಕಟ್ಟೆಯ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರು ಸೋಮವಾರ ಬೆಳಗ್ಗೆ ಅಂಗಡಿ ತೆರೆಯಲು ಬಂದಾಗ ಕಂಪೌಂಡ್ ಬಳಿ ಮೃತದೇಹ ಕಂಡಿದ್ದರು. ತಕ್ಷಣ ಈ ವಿಷಯವನ್ನು ಬಂದರ್ ಪೊಲೀಸರಿಗೆ ತಿಳಿಸಿದಾಗ, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತ ವ್ಯಕ್ತಿಯ ವಯಸ್ಸು ಸುಮಾರು 50 ರಿಂದ 55 ವರ್ಷ ಎಂದು ಅಂದಾಜಿಸಲಾಗಿದ್ದು, ಬಂದರ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.