ಮಂಗಳೂರು: ಟೆಕ್ಕಿ ಪವಿತ್ರಾರಾಣಿ ನೇತೃತ್ವದ 'ಕ್ಲೀನ್ ಕಡಲ್' ತಂಡ, 'ಪೆಪ್ಪೆರೆರೆರೆ' ತುಳು ಸಿನಿಮಾ ತಂಡ, ಗೃಹ ರಕ್ಷಕದಳ, ಹ್ಯಾಂಡ್ಸ್ ಆನ್ ಮಂಗಳೂರು, ಬೀಚ್ ರಿಜುವೆನೇಷನ್ ತಂಡ ಹಾಗೂ ಸ್ಥಳೀಯರೊಂದಿಗೆ ಸೇರಿ ಸೋಮೇಶ್ವರ ಕಡಲ ಕಿನಾರೆಯನ್ನು ಸ್ವಚ್ಛಗೊಳಿಸಿದೆ.
ಯುವ ಸಮೂಹದಿಂದ ಮಂಗಳೂರಿನ ಸೋಮೇಶ್ವರ ಬೀಚ್ ಸ್ವಚ್ಛತಾ ಕಾರ್ಯ - Someshwar beach
ಮಂಗಳೂರಿನ ಸೋಮೇಶ್ವರ ಕಡಲ ಕಿನಾರೆಯನ್ನು ಕ್ಲೀನ್ ಕಡಲ್ ತಂಡ ನಾಲ್ಕನೆಯ ಬಾರಿಗೆ ಸ್ವಚ್ಛಗೊಳಿಸಿ ಮೆಚ್ಚಗೆಗೆ ಪಾತ್ರವಾಗಿದೆ.

ಮಂಗಳೂರಿನ ಸೋಮೇಶ್ವರ ಬೀಚ್ ಕ್ಲೀನ್
ಮಂಗಳೂರಿನ ಸೋಮೇಶ್ವರ ಬೀಚ್ ಕ್ಲೀನ್
'ಕ್ಲೀನ್ ಕಡಲ್ ತಂಡ' ಈಗಾಗಲೇ ಸಾಕಷ್ಟು ಬೀಚ್ಗಳನ್ನು ಸ್ವಚ್ಛಗೊಳಿಸುವ ಕಾರ್ಯಗಳಲ್ಲಿ ತೊಡಗಿದ್ದು, ಈಗ ನಾಲ್ಕನೆಯ ಬಾರಿಗೆ ಸೋಮೇಶ್ವರ ಕಡಲ ಕಿನಾರೆಯನ್ನು ಸ್ವಚ್ಛಗೊಳಿಸಿದೆ.
ಈ ತಂಡಗಳು ಇಂದು ಸುಮಾರು 10-15 ಚೀಲಗಳಷ್ಟು ಗಾಜಿನ ಬಾಟಲಿಗಳು, ಥರ್ಮಾಕೋಲ್, ಚಪ್ಪಲಿ ಇನ್ನಿತರ ತ್ಯಾಜ್ಯವನ್ನು ಹೆಕ್ಕಿ ಸಂಗ್ರಹ ಮಾಡಿದೆ. ಈ ತ್ಯಾಜ್ಯವನ್ನು ವಿಲೇವಾರಿ ಮಾಡಿ ಬೀಚ್ ಪರಿಸರವನ್ನು ತ್ಯಾಜ್ಯ ಮುಕ್ತಗೊಳಿಸಿದೆ.