ಮಂಗಳೂರು: ನಗರದಲ್ಲಿ ಹೆಚ್ಚಿನ ಭದ್ರತೆಗೋಸ್ಕರ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಈ ಬಗ್ಗೆ ಜನರು ಆತಂಕ ಪಡುವ ಅಗತ್ಯ ಇಲ್ಲ. ಯಾವುದೇ ರೀತಿಯಾದ ವಿಶೇಷ ಸನ್ನಿವೇಶ ಇಲ್ಲ. ಆದರೂ ಬಿಗಿ ಬಂದೋಬಸ್ತು ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಹೇಳಿದರು.
ಮಂಗಳೂರಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ: ಪೊಲೀಸ್ ಆಯುಕ್ತ ಹರ್ಷ - ಡಾ.ಪಿ.ಎಸ್.ಹರ್ಷ
ಮಂಗಳೂರಿನಲ್ಲಿ ಹೆಚ್ಚಿನ ಭದ್ರತೆಗೋಸ್ಕರ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಈ ಬಗ್ಗೆ ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಹೇಳಿದರು.
![ಮಂಗಳೂರಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ: ಪೊಲೀಸ್ ಆಯುಕ್ತ ಹರ್ಷ](https://etvbharatimages.akamaized.net/etvbharat/prod-images/768-512-4249485-thumbnail-3x2-net.jpg)
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ
ಮಂಗಳೂರಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ: ಪೊಲೀಸ್ ಆಯುಕ್ತ ಹರ್ಷ
ಮಂಗಳೂರು ನಗರದ ಎಲ್ಲಾ ಪ್ರದೇಶಗಳಲ್ಲಿಯೂ ಪೊಲೀಸ್ ಕಣ್ಗಾವಲು ಇರಿಸಲಾಗಿದೆ. ವಿಶೇಷವಾಗಿ ಕರಾವಳಿ ತೀರ ಪ್ರದೇಶಗಳನ್ನು ಸೆಕ್ಟರ್ಗಳಾಗಿ ವಿಂಗಡಿಸಿ ಪ್ರತಿಯೊಂದು ಭಾಗಗಳಲ್ಲಿಯೂ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ಹದ್ದಿನ ಕಣ್ಗಾವಲು ಇರಿಸಿದ್ದೇವೆ.
ನಗರದಾದ್ಯಂತ ಮಾಲ್ಗಳು, ಆಸ್ಪತ್ರೆಗಳು, ಸಿನಿಮಾ ಥಿಯೇಟರ್, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಜನ ನಿಬಿಡ ಪ್ರದೇಶಗಳಲ್ಲಿ ವಿಶೇಷವಾದ ಗಮನಹರಿಸಿ ಪೊಲೀಸ್ ಕಣ್ಗಾವಲು ಇರಿಸಲಾಗಿದೆ ಎಂದಿದ್ದಾರೆ.