ಕರ್ನಾಟಕ

karnataka

ETV Bharat / state

ಮಂಗಳೂರು ಗಲಭೆ ಪ್ರಕರಣ: ಮ್ಯಾಜಿಸ್ಟ್ರೇಟ್ ತನಿಖೆ ಆರಂಭ, ಅಧಿಕಾರಿಗಳಿಂದ ಸ್ಥಳ ಪರಿಶೀಲನೆ - Riots during CAA protest at Managluru Magisterial investigation begins

ಡಿ.19 ರಂದು ಮಂಗಳೂರು ನಗರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್ ತನಿಖೆ ಆರಂಭಗೊಂಡಿದ್ದು, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಗಲಭೆ ನಡೆದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಸ್ಟೇಟ್ ಬ್ಯಾಂಕ್ ಪರಿಸರ, ನೆಲ್ಲಿಕಾಯಿ ರಸ್ತೆ ಹಾಗೂ ಬಂದರು ರಸ್ತೆ ಪರಿಸರದಲ್ಲಿ ಮಹಜರು ನಡೆಸಿ ಘಟನೆಯ ವಿವರಗಳನ್ನು ಸಂಗ್ರಹಿಸಿದೆ.

Mangalore riot case: Magisterial investigation begins
ಅಧಿಕಾರಿಗಳ ತಂಡದಿಂದ ಘಟನಾ ಸ್ಥಳಗಳ ಪರಿಶೀಲನೆ

By

Published : Dec 30, 2019, 1:52 PM IST

ಮಂಗಳೂರು:ಡಿ.19 ರಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆ ವೇಳೆ ನಗರದಲ್ಲಿ ನಡೆದ ಗಲಭೆ ಮತ್ತು ಗೋಲಿಬಾರ್‌ಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆ ಆರಂಭವಾಗಿದೆ.

ಅಧಿಕಾರಿಗಳ ತಂಡದಿಂದ ಘಟನಾ ಸ್ಥಳಗಳ ಪರಿಶೀಲನೆ

ಜಿ.ಜಗದೀಶ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಗಲಭೆ ನಡೆದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಸ್ಟೇಟ್ ಬ್ಯಾಂಕ್ ಪರಿಸರ, ನೆಲ್ಲಿಕಾಯಿ ರಸ್ತೆ ಹಾಗೂ ಬಂದರು ರಸ್ತೆ ಪರಿಸರದಲ್ಲಿ ಮಹಜರು ನಡೆಸಿ ಘಟನೆಯ ವಿವರಗಳನ್ನು ಸಂಗ್ರಹಿಸಿದೆ.

ಗೋಲಿಬಾರ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದರು. ಈ ಹಿನ್ನೆಲೆ ಡಿ.26 ರಂದು ಪೂರ್ವಭಾವಿಯಾಗಿ ನಗರಕ್ಕೆ ಬಂದಿದ್ದ ಸಿಐಡಿ ಎಸ್ಪಿ ರಾಹುಲ್ ಕುಮಾರ್ ಶಹಾಪುರವಾಡ್ ನೇತೃತ್ವದ ಸಿಐಡಿ ಪೊಲೀಸರ ತಂಡ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿತ್ತು

For All Latest Updates

TAGGED:

ABOUT THE AUTHOR

...view details