ಮಂಗಳೂರು: ಪಂಪ್ವೆಲ್ನಲ್ಲಿ ನಿರ್ಮಾಣವಾಗುತ್ತಿರುವ ಫ್ಲೈ ಓವರ್ ಕಾಮಗಾರಿ ಆರಂಭವಾಗಿ ಹತ್ತು ವರ್ಷ ತುಂಬಿದೆ. ದಶಕಗಳ ಕಾಲದ ಕಾಮಗಾರಿ ಕೊನೆಗೂ ಪೂರ್ಣಗೊಂಡಿದೆ!
ದಶಕದ ಬಳಿಕ ಕೊನೆಗೂ ಪೂರ್ಣಗೊಂಡ ಮಂಗಳೂರಿನ ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿ! - ಪೂರ್ಣಗೊಂಡ ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ
ಮಂಗಳೂರಿನ ಪಂಪ್ ವೆಲ್ನಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಆರಂಭವಾಗಿ ಹತ್ತು ವರ್ಷದ ಬಳಿಕ ಇದೀಗ ಪೂರ್ಣಗೊಂಡಿದೆ.
![ದಶಕದ ಬಳಿಕ ಕೊನೆಗೂ ಪೂರ್ಣಗೊಂಡ ಮಂಗಳೂರಿನ ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿ! Mangalore Pump Well Ply Over](https://etvbharatimages.akamaized.net/etvbharat/prod-images/768-512-5894947-thumbnail-3x2-net.jpg)
ದಶಕದ ಬಳಿಕ ಪೂರ್ಣಗೊಂಡ ಮಂಗಳೂರಿನ ಪಂಪ್ ವೆಲ್ ಪ್ಲೈ ಓವರ್ ಕಾಮಗಾರಿ
ದಶಕದ ಬಳಿಕ ಪೂರ್ಣಗೊಂಡ ಮಂಗಳೂರಿನ ಪಂಪ್ ವೆಲ್ ಪ್ಲೈ ಓವರ್ ಕಾಮಗಾರಿ
ಕೇರಳದಿಂದ ಮುಂಬಯಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಪಂಪ್ವೆಲ್ನಲ್ಲಿ 10 ವರ್ಷದಿಂದ ಫ್ಲೈ ಓವರ್ ಕಾಮಗಾರಿ ನಡೆಯುತ್ತಲೇ ಇತ್ತು. ಇದರ ಗುತ್ತಿಗೆ ಪಡೆದುಕೊಂಡಿದ್ದ ನವಯುಗ ಸಂಸ್ಥೆ ಆರ್ಥಿಕ ಮುಗ್ಗಟ್ಟಿನಿಂದ ಪ್ಲೈ ಓವರ್ ಕಾಮಗಾರಿ ವೇಗ ಪಡೆದಿರಲಿಲ್ಲ. ವಿಳಂಬ ಕೆಲಸದಿಂದ ಫ್ಲೈ ಓವರ್ ಕಾಮಗಾರಿ ಪೂರ್ಣವಾಗದೆ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಈ ಕಾಮಗಾರಿ ಪೂರ್ಣವಾಗದ ಹಿನ್ನೆಲೆಯಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು.
ಕಳೆದ ಕೆಲವು ವರ್ಷಗಳಿಂದ ಅವರು ನೀಡುತ್ತಿದ್ದ ಗಡುವು ಸಾಕಷ್ಟು ಟ್ರೋಲ್ಗಿರಿಗೆ ಗುರಿಯಾಗಿತ್ತು. ಜನವರಿ 1 ಕ್ಕೆ ಉದ್ಘಾಟನೆಯಾಗುವ ಗಡುವು ನೀಡಿದ್ದ ಅವರು ಅದು ಸಾಧ್ಯವಾಗದ ಸಂದರ್ಭದಲ್ಲಿ ಇನ್ನು ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ಸಂಬಂಧಿಸಿದಂತೆ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ ಎಂದಿದ್ದರು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಕಾಯುತ್ತಿದೆ.
Last Updated : Jan 30, 2020, 3:05 PM IST