ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ಪತ್ತೆ ಮಾಡಿದ್ದ 1.82 ಕೋಟಿ ಮೌಲ್ಯದ ಮಾದಕ ದ್ರವ್ಯವನ್ನು ಇಂದು ನಾಶ ಪಡಿಸಲಾಯಿತು. ಮಂಗಳೂರು ನಗರ ಪೊಲೀಸ್ ಇಲಾಖೆಯಿಂದ ರೂ 1,28,74,700 ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯಿಂದ ರೂ 53,75,300 ಮೌಲ್ಯದ ಮಾದಕ ದ್ರವ್ಯವನ್ನು ನಾಶಪಡಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಇಲಾಖೆಯ 15 ಠಾಣೆಯಿಂದ ವಿಲೇವಾರಿಯಾದ ಪ್ರಕರಣಗಳ 580 ಕೆಜಿ 860 ಗ್ರಾಂ ಗಾಂಜಾ ( ರೂ 1,16,17,200 ಮೌಲ್ಯ), 25 ಗ್ರಾಂ ಹೆರಾಯಿನ್ ( ರೂ 1,37,500 ಮೌಲ್ಯ ), 320 ಗ್ರಾಂ ಎಂಡಿಎಂಎ (ರೂ 1,12,000 ಮೌಲ್ಯ) ಮಾದಕ ದ್ರವ್ಯಗಳನ್ನು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳ 11 ಪ್ರಕರಣಗಳಲ್ಲಿ, 53 ಕೆಜಿ 128 ಗ್ರಾಂ ಗಾಂಜಾ ( ರೂ 23,75,300 ಮೌಲ್ಯ) ಮತ್ತು 120 ಗ್ರಾಂ ಹೆರಾಯಿನ್ ( ರೂ 30 ಲಕ್ಷ) ಮೌಲ್ಯದ ಮಾದಕ ದ್ರವ್ಯವನ್ನು ನಾಶಪಡಿಸಲಾಗಿದೆ.