ಮಂಗಳೂರು: ನಗರದ ಪಂಪ್‌ವೆಲ್ ಬಳಿ ಮಹಿಳೆಯೋರ್ವರು ಚಲಾಯಿಸುತ್ತಿದ್ದ ಕಾರೊಂದರ ಟೈರ್ ಪಂಕ್ಚರ್ ಆಗಿತ್ತು. ಇದನ್ನು ಗಮನಿಸಿದ ಮಂಗಳೂರು ದಕ್ಷಿಣ ಸಂಚಾರ (ನಾಗುರಿ) ಠಾಣಾ ಪೊಲೀಸರು ಬೇರೆ ಟೈರ್ ಅಳವಡಿಸಿ ಮಾನವೀಯತೆ ಮೆರೆದಿರುವ ಘಟನೆ ಇಂದು ನಡೆದಿದೆ.
ಮಹಿಳೆಯ ಕಾರು ಟೈರ್ ಬದಲಿಸಿ ಮಾನವೀಯತೆ ಮೆರೆದ ಮಂಗಳೂರು ಪೊಲೀಸರು - ಮಾನವೀಯತೆ ಮೆರೆದ ಮಂಗಳೂರು ಪೊಲೀಸರು
ಪಂಪ್ ವೆಲ್ ಸಮೀಪ ಬರುತ್ತಿದ್ದಾಗ ಇದ್ದಕ್ಕಿದ್ದಂತೆ ಕಾರು ಟೈರ್ ಪಂಕ್ಚರ್ ಆಗಿದೆ. ಈ ಸಂದರ್ಭ ಹೈವೇ ಪೆಟ್ರೋಲ್ ಸ್ಥಳದಲ್ಲಿದ್ದು, ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ಟೈರ್ ಬದಲಿಸಿ ಮಾನವೀಯತೆ ಮೆರೆದಿದ್ದಾರೆ.
ಇಂದು ಸಂಜೆ 7ರ ಹೊತ್ತಿಗೆ ಕುಂದಾಪುರ ಮೂಲದ ಮಹಿಳೆಯೋರ್ವರು ನಾಗುರಿಯಿಂದ ಮಂಗಳೂರು ನಗರದ ಕಡೆಗೆ ಎಳೆಯ ಮಗುವಿನ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದರು. ಆದರೆ ಪಂಪ್ ವೆಲ್ ಸಮೀಪ ಬರುತ್ತಿದ್ದಾಗ ಇದ್ದಕ್ಕಿದ್ದಂತೆ ಕಾರು ಟೈರ್ ಪಂಕ್ಚರ್ ಆಗಿದೆ. ಈ ಸಂದರ್ಭ ಹೈವೇ ಪೆಟ್ರೋಲ್ ಸ್ಥಳದಲ್ಲಿದ್ದು, ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ಟೈರ್ ಬದಲಿಸಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭ ಸಂಚಾರ ಠಾಣೆ ಎಎಸ್‌ಐ ಅಲ್ಬರ್ಟ್ ಲಸ್ರಾದೋ, ಸಿಬ್ಬಂದಿ ಮಹೇಶ್ ಹಾಗೂ ಹೋಂಗಾರ್ಡ್ ಆಸೀಫ್ ಇದ್ದರು.
ಇದನ್ನೂ ಓದಿ: ನಾಳೆ ರಾಜ್ಯಪಾಲರ ಭೇಟಿ ಮಾಡಲಿರುವ ಸಿಎಂ: ಹೈಕಮಾಂಡ್ನಿಂದ ಬಂತಾ ಸೂಚನೆ?