ಮಂಗಳೂರು: ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳ ಐಷಾರಾಮಿ ಕಾರನ್ನು ಪೊಲೀಸರೇ ಮಾರಾಟ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಈ ಪ್ರಕರಣವನ್ನು ಸಿಐಡಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಜಾಗ್ವಾರ್ ಕಾರು ಮಾರಾಟ ಪ್ರಕರಣ: ಮಂಗಳೂರು ಪೊಲೀಸರಿಂದಲೇ ಕೇಸ್ ಸಿಐಡಿಗೆ ಹಸ್ತಾಂತರ - ಮಂಗಳೂರು ಪೊಲೀಸರಿಂದಲೇ ಆರೋಪಿಗಳ ಕಾರು ಮಾರಾಟ ಪ್ರಕರಣ ಸಿಐಡಿಗೆ,
ಮಂಗಳೂರಿನಲ್ಲಿ ಪೊಲೀಸರಿಂದಲೇ ಆರೋಪಿಗಳ ಕಾರು ಮಾರಾಟ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗುತ್ತೆಂದು ತಿಳಿದು ಬಂದಿದೆ.
ಮಂಗಳೂರು ಪೊಲೀಸರಿಂದಲೇ ಆರೋಪಿಗಳ ಕಾರು ಮಾರಾಟ ಪ್ರಕರಣ ಸಿಐಡಿಗೆ
ವಂಚನೆ ಪ್ರಕರಣದ ಆರೋಪಿಗಳ ಜಾಗ್ವಾರ್ ಕಾರನ್ನು ಮಂಗಳೂರು ನಗರ ಪೊಲೀಸರು ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾದ ಬಳಿಕ ರಾಜ್ಯ ಎಡಿಜಿಪಿ ಪ್ರತಾಪ್ ರೆಡ್ಡಿ ಅವರು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದರು. ಅದರಂತೆ ಇತ್ತೀಚೆಗೆ ಮಂಗಳೂರು ಕಮಿಷನರ್ ಮಧ್ಯಂತರ ವರದಿಯನ್ನು ಎಡಿಜಿಪಿಗೆ ಸಲ್ಲಿಸಿದ್ದರು.
ಈ ವರದಿ ಸಲ್ಲಿಕೆಯ ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಲಾಗಿದೆ. ಈ ಪ್ರಕರಣದ ತನಿಖೆ ನಡೆಸಲು ಶೀಘ್ರದಲ್ಲಿ ಸಿಐಡಿ ತಂಡ ರಚನೆಯಾಗುವ ಸಾಧ್ಯತೆ ಇದೆ.