ಮಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಬಳಕೆಯ ನಿಯಂತ್ರಣಕ್ಕೆ ಮುಂದಾಗಿರುವ ಪೊಲೀಸರು, ವಿವಿಧ ಮಾದಕ ವಸ್ತುಗಳ ಪ್ರಕರಣದಲ್ಲಿ ಭಾಗಿಯಾಗಿದ್ದ 94 ಮಂದಿ ಹಳೆಯ ಆರೋಪಿಗಳ ಪರೇಡ್ ನಡೆಸಿದರು.
ಮಾದಕ ವಸ್ತು ಪ್ರಕರಣ: ಹಳೆ ಆರೋಪಿಗಳಿಗೆ ಮಂಗಳೂರು ಪೊಲೀಸ್ ಕಮೀಷನ ಖಡಕ್ ಎಚ್ಚರಿಕೆ - undefined
ಮಂಗಳೂರಲ್ಲಿ ಮಾದಕ ವಸ್ತುಗಳ ವ್ಯಸನಿಗಳು ಹೆಚ್ಚುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರು ಆರೋಪಿಗಳ ಪರೇಡ್ ನಡೆಸಿ ಡ್ರಗ್ಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
![ಮಾದಕ ವಸ್ತು ಪ್ರಕರಣ: ಹಳೆ ಆರೋಪಿಗಳಿಗೆ ಮಂಗಳೂರು ಪೊಲೀಸ್ ಕಮೀಷನ ಖಡಕ್ ಎಚ್ಚರಿಕೆ](https://etvbharatimages.akamaized.net/etvbharat/prod-images/768-512-3919422-thumbnail-3x2-vickyjpg.jpg)
ಎಚ್ಚರಿಕೆ ನೀಡಿದ ಪೋಲೀಸ್ ಕಮೀಷನರ್
ಮಂಗಳೂರು ನಗರ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್, ಆರೋಪಿಗಳ ಪರೇಡ್ ನಡೆಸಿ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಹಿಂದಿನ ಮೂರು ವರ್ಷಗಳಲ್ಲಿ ವಿವಿಧ ಡ್ರಗ್ಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಪರೇಡ್ ನಡೆಸಿ ವಿಚಾರಣೆ ನಡೆಸಲಾಯಿತು.
ಡ್ರಗ್ಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Last Updated : Jul 23, 2019, 2:27 PM IST