ಮಂಗಳೂರು :ನಗರದಲ್ಲಿ ಇಂದಿನಿಂದ ಆರು ದಿನಗಳ ಕಾಲ ವಾಹನ ಸಂಚಾರ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದರು.
ಸಂಚಾರ ನಿಯಮ ಉಲ್ಲಂಘನೆ ತಡೆ ಕುರಿತಂತೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿರುವುದು.. ಇಂದಿನಿಂದ ಅ.2ವರೆಗೆ ಮಂಗಳೂರು ನಗರದಲ್ಲಿ ಆರು ದಿನಗಳ ಕಾಲ ಬೇರೆ ಬೇರೆ ರೀತಿಯ ವಾಹನ ತಪಾಸಣೆಯ ಅಭಿಯಾನ ಕೈಗೊಳ್ಳಲಾಗಿದೆ. ಇಂದು ವಾಹನಗಳ ಗಾಜಿಗೆ ಟಿಂಟ್ ಅಳವಡಿಕೆಯ ವಿರುದ್ಧ ಕಾರ್ಯಾಚರಣೆ ನಡೆಯಲಿದೆ. ಇದಕ್ಕಾಗಿ ಟಿಂಟ್ ಪತ್ತೆ ಮಾಡುವ ಯಂತ್ರ ಬಳಸಲಾಗುತ್ತದೆ. ಇದಕ್ಕೆ 11 ಎಂವಿ ಕಾಯ್ದೆಯಡಿ ₹500 ದಂಡ ವಿಧಿಸಲಾಗುತ್ತದೆ ಎಂದು ವಿಡಿಯೋ ಮಾಡಿ ಆಯುಕ್ತರು ತಿಳಿಸಿದರು.
ಸೆ.28ರಂದು ವಾಹನಗಳ ನಂಬರ್ ಪ್ಲೇಟ್ನಲ್ಲಿನ ದೋಷದ ಕುರಿತಂತೆ ಕಾರ್ಯಾಚರಣೆ ನಡೆಯಲಿದೆ. ಇದಕ್ಕೆ 177 ಎಂವಿ ಕಾಯ್ದೆಯಡಿ ರೂ. 500 ದಂಡ ಮೊತ್ತವಿದೆ. ಸೆ.29ರಂದು ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿಯ ಸವಾರರು ಹೆಲ್ಮೆಟ್ ಧರಿಸದೆ ಸಂಚರಿಸುವ ಬಗ್ಗೆ ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಸೆ.30ರಂದು ವಾಹನ ಇನ್ಸೂರೆನ್ಸ್ ತಪಾಸಣೆ ಕಾರ್ಯಾಚರಣೆ ಇದೆ. ಒಂದು ವೇಳೆ ವಾಹನ ಪಾಲಿಸಿ ಇಲ್ಲದಿದ್ದಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ 1 ಸಾವಿರ ಹಾಗೂ ಎಲ್ಎಂವಿಗೆ 2 ಸಾವಿರ ರೂ. ದಂಡ ಹಾಕಲಾಗುತ್ತದೆ. ಹೆಚ್ಜಿವಿಗೆ ರೂ.4000 ದಂಡವಿದೆ. ಅ.1ರಂದು ಹಳೆ ವಾಹನ ದೂರುಗಳ ಪರಿಶೀಲನೆ ಇದೆ. ಅ.2ರಂದು ವಾಯುಮಾಲಿನ್ಯ ಪ್ರಮಾಣ ಪತ್ರ ತಪಾಸಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Live video: ಬೆಂಗಳೂರಿನಲ್ಲಿ ನೋಡ ನೋಡುತ್ತಿದ್ದಂತೆ ಕಟ್ಟಡ ಕುಸಿತ.. ಸ್ವಲ್ಪದರಲ್ಲೇ ತಪ್ಪಿದ ಅನಾಹುತ