ಮಂಗಳೂರು:ಕರ್ತವ್ಯದ ಒತ್ತಡದ ನಡುವೆಯೇ ಮಂಗಳೂರು ನಗರ ನೂತನ ಪೊಲೀಸ್ ಕಮಿಷನರ್ ಉಳ್ಳಾಲದ ಕೋಡಿಯಲ್ಲಿನ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ಕೊಂಚ ರಿಲ್ಯಾಕ್ಸ್ ಆದರು.
ಸ್ಥಳೀಯ ಯುವಕರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ರಿಲ್ಯಾಕ್ಸ್ ಆದ ಮಂಗಳೂರು ಪೊಲೀಸ್ ಕಮಿಷನರ್ - ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಸುದ್ದಿ,
ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಸ್ಥಳೀಯ ಯುವಕರೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು.
ಸ್ಥಳೀಯ ಯುವಕರೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಮಂಗಳೂರು ಪೊಲೀಸ್ ಕಮಿಷನರ್
ಕೋಡಿ, ಮೊಗವೀರಪಟ್ಣ, ಕೋಟೆಪುರ, ಮಾಸ್ತಿಕಟ್ಟೆ, ಉಳ್ಳಾಲ, ಒಳಪೇಟೆ ಮತ್ತು ತೊಕೊಟ್ಟು ಪ್ರದೇಶಗಳಿಗೆ ಭೇಟಿ ನೀಡಿದ ಮಂಗಳೂರು ನಗರ ನೂತನ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಅಲ್ಲಿನ ಜನರೊಂದಿಗೆ ಸಂವಾದ ನಡೆಸಿದರು. ಅಲ್ಲದೆ ಅಲ್ಲಿನ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡಿದರು.
ಮೊನ್ನೆ ನಗರದ ಪಾಂಡೇಶ್ವರದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಕ್ತಿಗೀತೆ ಹಾಡಿರುವ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ನಿನ್ನೆ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ಸಾರ್ವಜನಿಕರಿಗೆ ನಿಕಟವರ್ತಿಯಾಗುತ್ತಿದ್ದಾರೆ.