ಮಂಗಳೂರು:ಪೊಲೀಸ್ ಕಮಿಷನರ್ ಡಾ.ಪಿ.ಎಸ್ ಹರ್ಷ ಅವರು ಕೋಮುವಾದಿ ಎಂದು ಸಿಎಫ್ಐ ರಾಜ್ಯಾಧ್ಯಕ್ಷ ಫಯಾಜ್ ದೊಡ್ಡಮನೆ ಆರೋಪಿಸಿದ್ದಾರೆ.
ಹಿಂದೂ ರಾಷ್ಟ್ರ ವಿವಾದ: ಮಂಗಳೂರು ಪೊಲೀಸ್ ಕಮಿಷನರ್ ಕೋಮುವಾದಿ ಎಂದ ಸಿಎಫ್ಐ - latest mangalore news
ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ.ಎಸ್ ಹರ್ಷ ಅವರು ಕೋಮುವಾದಿ ಎಂದು ಸಿಎಫ್ಐ ರಾಜ್ಯಾಧ್ಯಕ್ಷ ಫಯಾಜ್ ದೊಡ್ಡಮನೆ ಆಪಾದಿಸಿದ್ದಾರೆ.
ಹಿಂದೂ ರಾಷ್ಟ್ರದಲ್ಲಿ ಮುಸ್ಲಿಮರಿಗೆ ಅವಕಾಶವಿಲ್ಲವೆಂಬ ಹೇಳಿಕೆ ನೀಡಿದ ಬಳಿಕ ಹಲ್ಲೆಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫಯಾಜ್, ಘಟನೆಯಲ್ಲಿ ಯುವಕ ಮಂಜುನಾಥ್ ಸಂವಿಧಾನ ವಿರೋಧಿ, ದೇಶದ್ರೋಹದ ಹೇಳಿಕೆ ನೀಡಿದ್ದಾನೆ. ಅವನಿಗೆ ಹಲ್ಲೆ ಮಾಡಿರುವುದು ಕೇವಲ ಪ್ರತಿಕ್ರಿಯೆಯಷ್ಟೇ, ಅಷ್ಟು ಮಾತ್ರಕ್ಕೆ ವಿದ್ಯಾರ್ಥಿಗಳನ್ನು ಕ್ರಿಮಿನಲ್ ರೀತಿ ಬಿಂಬಿಸುವುದು ಸರಿಯಲ್ಲವೆಂದರು.
ಮಂಜುನಾಥ್ ಮೇಲೆ ಪ್ರಕರಣ ದಾಖಲಿಸಲು, ಕಮಿಷನರ್ ಜೊತೆಗೆ ಮಾತಾಡಲು ಸಿಎಫ್ಐ ತಂಡಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಠಾಣೆಯೊಂದರ ಅಧಿಕಾರಿಯೊಬ್ಬರು ಹರ್ಷ ಅವರು ಕಮಿಷನರ್, ಕೋಮುವಾದಿ ಅಲ್ಲ ಅನ್ನುತ್ತಾರೆ. ಆದರೆ ಅವರು ಕೋಮುವಾದಿ ಎಂಬುದು ಸ್ಪಷ್ಟ ಎಂದರು. ಪೊಲೀಸರು ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ, ಕಮಿಷನರ್ ಅವರು ಮಂಗಳೂರಿನಲ್ಲಿ ಇರಲು ಲಾಯಕ್ಕಿಲ್ಲವೆಂದು ಟೀಕಿಸಿದರು.