ಬಂಟ್ವಾಳ:ಮಂಗಳೂರಿಗೆ ನೀರೊದಗಿಸಲು ನಿರ್ಮಿಸಲಾದ ತುಂಬೆ ವೆಂಟೆಡ್ ಡ್ಯಾಂನ ಪಕ್ಕದಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ತಡೆಗೋಡೆಯೊಂದು ಕುಸಿದ ಹಿನ್ನೆಲೆಯಲ್ಲಿ ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ತಡೆಗೋಡೆ ಕುಸಿತ, ಸ್ಥಳ ಪರಿಶೀಲಿಸಿದ ಮಂಗಳೂರು ಮೇಯರ್ - ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ
ವಿಪರೀತ ಮಳೆಯಿಂದ ತುಂಬೆ ಅಣೆಕಟ್ಟು ಆಸುಪಾಸಿನ ತಡೆಗೋಡೆ ಕುಸಿದಿದ್ದು, ಸ್ಥಳಕ್ಕೆ ಮೇಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
![ತಡೆಗೋಡೆ ಕುಸಿತ, ಸ್ಥಳ ಪರಿಶೀಲಿಸಿದ ಮಂಗಳೂರು ಮೇಯರ್ Tumbe dam](https://etvbharatimages.akamaized.net/etvbharat/prod-images/768-512-05:55:42:1598012742-kn-mng-bantwal-02-mayor-photo-kac10019-21082020175509-2108f-1598012709-50.jpeg)
Tumbe dam
ವಿಪರೀತ ಮಳೆಯಿಂದ ತುಂಬೆ ಅಣೆಕಟ್ಟು ಆಸುಪಾಸಿನ ತಡೆಗೋಡೆ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಆಯುಕ್ತರು ಮತ್ತು ಮನಪಾ ಅಧಿಕಾರಿಗಳ ತಂಡದೊಂದಿಗೆ ಮೇಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ತಡೆಗೋಡೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು. ಮತ್ತೆ ಮಳೆಯಾಗುವ ವೇಳೆ ತಡೆಗೋಡೆಗೆ ಹಾನಿಯಾಗದಂತೆ ಮುಂಜಾಗರೂಕತೆ ವಹಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದ್ದು, ಈ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಇದೇ ವೇಳೆ ತುಂಬೆ ಅಣೆಕಟ್ಟು ಕಚೇರಿಗೆ ಭೇಟಿ ನೀಡಿ, ಅಲ್ಲಿನ ಕುಂದುಕೊರತೆಗಳ ಬಗ್ಗೆ ಪರಿಶೀಲಿಸಲಾಯಿತು.