ಬಜ್ಜೋಡಿ(ಮಂಗಳೂರು) : ಮಾತೆ ಮರಿಯಮ್ಮರ ಜನ್ಮದಿನದ ಪ್ರಯುಕ್ತ ನಗರದ ಬಜ್ಜೋಡಿಯಲ್ಲಿರುವ ಇನ್ಫೆಂಟ್ ಮೇರಿ ಚರ್ಚ್‌ನಲ್ಲಿ ಸಂಭ್ರಮದ ಬಲಿಪೂಜೆ ನೆರವೇರಿತು.
ಮೇರಿ ಚರ್ಚ್‍ನಲ್ಲಿ ಮೊಂತಿ ಹಬ್ಬ ಆಚರಣೆ: ಭಕ್ತಾದಿಗಳಿಗೆ ಹೊಸ ತೆನೆ ವಿತರಣೆ - mriyamma fest in mangalore church
ಮಂಗಳೂರಿನ ಬಜ್ಜೋಡಿಯಲ್ಲಿ ಮಾತೆ ಮರಿಯಮ್ಮ ಜನ್ಮದಿನದ ಅಂಗವಾಗಿ ಇನಫೆಂಟ್ ಮೇರಿ ಚರ್ಚ್‌ನಲ್ಲಿ ಸಂಭ್ರಮದ ಬಲಿಪೂಜೆ ಆಚರಿಸಲಾಯಿತು.
![ಮೇರಿ ಚರ್ಚ್‍ನಲ್ಲಿ ಮೊಂತಿ ಹಬ್ಬ ಆಚರಣೆ: ಭಕ್ತಾದಿಗಳಿಗೆ ಹೊಸ ತೆನೆ ವಿತರಣೆ mangalore mariyamma birth anniversary](https://etvbharatimages.akamaized.net/etvbharat/prod-images/768-512-8724389-633-8724389-1599559635238.jpg)
ಮೇರಿ ಚರ್ಚ್‍ನಲ್ಲಿ ಮೊಂತಿ ಹಬ್ಬ ಆಚರಣೆ
ಮೇರಿ ಚರ್ಚ್‍ನಲ್ಲಿ ಮೊಂತಿ ಹಬ್ಬ ಆಚರಣೆ
ಚರ್ಚ್ನ ಪ್ರಧಾನ ಯಾಜಕ ವಂ.ಫಾ.ಆರ್ಚಿಬಾಲ್ಡ್ ಗೊನ್ಸಾಲ್ವಿಸ್‍ರವರು ಬಲಿಪೂಜೆಯನ್ನು ಅರ್ಪಿಸಿದರು.
ಇದಕ್ಕೂ ಮೊದಲು ಅವರು ಎಲ್ಲಾ ಭಕ್ತಾದಿಗಳಿಗೂ ಹೊಸ ತೆನೆಯನ್ನು ಅರ್ಪಿಸಿ ಆಶೀರ್ವದಿಸಿದರು. ತದನಂತರ ಭಕ್ತಾದಿಗಳು ತಂದಂತಹ ಹೂವುಗಳನ್ನು ಮಾತೆ ಮರಿಯಮ್ಮನವರಿಗೆ ಅರ್ಪಿಸಿದರು. ಈ ಸಂದರ್ಭ ಅವರು ಮಾತೆ ಮರಿಯಮ್ಮನವರ ಮುಖಾಂತರ ದೊರೆತ ಎಲ್ಲಾ ಉಪಕಾರಗಳಿಗೆ ದೇವರಿಗ ಕೃತಜ್ಞತೆಯನ್ನು ಸಲ್ಲಿಸಿದರು. ಈ ಸಂದರ್ಭ ಚರ್ಚ್ನ ಗುರುಗಳಾದ ವಂ.ಫಾ. ಐವನ್ ಡಿಸೋಜಾ, ಫಾ.ಪ್ಯಾಟ್ರಿಕ್ ಲೋಬೊ, ಫಾ.ರಾಯನ್ ಪಿಂಟೊ, ಫಾ.ಬಾರ್ನಬಾಸ್ ಮೊನಿಸ್‍ರವರು ಇದ್ದರು.