ಮಂಗಳೂರು: ಕೃಷ್ಣಾಪುರ ನೈತಂಗಡಿ ಎಂಬಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದ ಸ್ಥಳೀಯ ಯುವಕನೋರ್ವ ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಈಜು ಬಾರದೆ ಕೆರೆಯಲ್ಲಿ ಮುಳುಗಿ ಯುವಕ ಸಾವು - Mangalore latest news
ತಾರನಾಥ್ ಎಂಬವರ ಪುತ್ರ ಸಂತೋಷ್ ದೇವಾಡಿಗ (22) ಕೃಷ್ಣಾಪುರ ನೈತಂಗಡಿ ಎಂಬಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದು, ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಮೃತನನ್ನು ಸ್ಥಳೀಯ ನಿವಾಸಿ ತಾರನಾಥ್ ಎಂಬವರ ಪುತ್ರ ಸಂತೋಷ್ ದೇವಾಡಿಗ (22) ಎಂದು ಗುರುತಿಸಲಾಗಿದೆ. ಸಂತೋಷ್ ಇಂದು ಮಧ್ಯಾಹ್ನ ಕೃಷ್ಣಾಪುರ ಬಳಿಯ ಕೆರೆಯಲ್ಲಿ ತನ್ನ ನಾಲ್ವರು ಗೆಳೆಯರ ಜೊತೆ ಈಜಲು ತೆರಳಿದ್ದ. ಕಲ್ಲಿನ ಪಕ್ಕದಲ್ಲೇ ಈಜಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಮೇಲೆ ಬರಲಾಗದೆ ಮುಳುಗಿದ್ದಾನೆ. ಸಂತೋಷ್ ಮುಳುಗುವುದನ್ನು ಕಂಡು ಸ್ನೇಹಿತರು ಬೊಬ್ಬೆ ಹೊಡೆದಿದ್ದು, ಸ್ಥಳೀಯರು ಸ್ಥಳಕ್ಕಾಗಮಿಸಿ ರಕ್ಷಿಸಲು ಯತ್ನಿಸಿದರೂ ಕೂಡಾ ಬದುಕುಳಿಸಲಾಗಲಿಲ್ಲ.
ಯುವಕ ಪ್ರಸ್ತುತ ಖಾಸಗಿ ಕಾಲೇಜಿನಲ್ಲಿ ತೃತೀಯ ವರ್ಷದ ಡಿಪ್ಲೋಮಾ ಓದುತ್ತಿದ್ದ. ತಾಯಿ ಹಾಗೂ ಓರ್ವ ತಮ್ಮನನ್ನು ಅಗಲಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಸುರತ್ಕಲ್ ಠಾಣಾ ಪೊಲೀಸರು ಭೇಟಿ ನೀಡಿ ಶವ ಮಹಜರು ನಡೆಸಿದ್ದಾರೆ.