ಮಂಗಳೂರು:ಕಾಶ್ಮೀರ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸನ್ನದ್ಧವಾಗಬೇಕು ಎಂದು ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಸಯೀದ್ ಹಸ್ನೈನ್ ಹೇಳಿದ್ದಾರೆ.
ಕಾಶ್ಮೀರವನ್ನು ಒಂದುಗೂಡಿಸುವುದೇ ನಮ್ಮ ಮುಂದಿನ ಗುರಿ: ಲೆ.ಜ. ಸಯೀದ್ ಹಸ್ನೈನ್ - ಮಂಗಳೂರು ಲಿಟ್ ಫೇಸ್ಟ್ ಕಾರ್ಯಕ್ರಮ ಸುದ್ದಿ
ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಲಿಟ್ ಫೆಸ್ಟ್ನಲ್ಲಿ ಭಾಗವಹಿಸಿ ಮಾತನಾಡಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಸಯೀದ್ ಹಸ್ನೈನ್, ಕಾಶ್ಮೀರವನ್ನು ಭಾರತದೊಂದಿಗೆ ಒಂದುಗೂಡಿಸುವುದೇ ನಮ್ಮ ಮುಂದಿನ ಗುರಿಯಾಗಿರಬೇಕು. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಜನತೆಯನ್ನು ಮಾನಸಿಕವಾಗಿ ಭಾರತದೊಂದಿಗೆ ಒಂದುಗೂಡಿಸುವುದು ಮುಖ್ಯ ಎಂದು ಹೇಳಿದರು.
ನಗರದ ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಲಿಟ್ ಫೆಸ್ಟ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ಕೆಲವೊಂದು ವರ್ಗವನ್ನು ಬಿಟ್ಟರೆ ಉಳಿದವರು ಭಾರತೀಯರಾಗಿಯೇ ಇದ್ದಾರೆ. ಕಾಶ್ಮೀರವನ್ನು ಭಾರತದೊಂದಿಗೆ ಒಂದುಗೂಡಿಸುವುದೇ ನಮ್ಮ ಮುಂದಿನ ಗುರಿಯಾಗಿರಬೇಕು. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಜನತೆಯನ್ನು ಮಾನಸಿಕವಾಗಿ ಭಾರತದೊಂದಿಗೆ ಒಂದುಗೂಡಿಸುವುದು ಮುಖ್ಯ ಎಂದು ಸಯೀದ್ ಹಸ್ನೈನ್ ಹೇಳಿದರು.
ಕಾಶ್ಮೀರಿಗಳಿಗೆ ಸೂಕ್ತ ಶಿಕ್ಷಣ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಮುಖ್ಯ ಕಾರ್ಯವಾಗಬೇಕು. ಈ ಮೂಲಕ ಸರ್ಕಾರ ಅಧಿಕ ಸಂಖ್ಯೆಯಲ್ಲಿ ಶಾಲೆಗಳನ್ನು ತೆರೆಯಬೇಕಾಗಿದೆ. ಅಲ್ಲದೆ ಕಾಶ್ಮೀರದ ಜನರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಸೂಕ್ತ ನೀತಿಯನ್ನು ಜಾರಿಗೆ ತರುವುದು ಭವಿಷ್ಯದ ದೃಷ್ಟಿಯಿಂದ ಅನುಕೂಲಕರ ಎಂದು ಪ್ರೊ. ಎಂ.ಡಿ.ನಲಪಾತ್ ಹೇಳಿದ್ರು.
TAGGED:
mangalore lit fest program