ಮಂಗಳೂರು: 150 ವರ್ಷಗಳಿಗಿಂತಲೂ ಹೆಚ್ಚು ಕಾಲ ಕಟೀಲು ಸಮೀಪದಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ಬಡ ಕುಟುಂಬವೊಂದು ಕೊನೆಗೂ ಹಕ್ಕುಪತ್ರ ಪಡೆದುಕೊಂಡಿದ್ದು, ಕುಟುಂಬಸ್ಥರಲ್ಲಿ ಸಂತಸ ಮನೆಮಾಡಿದೆ.
ಕಟೀಲು-ಉಲ್ಲಂಜೆ-ಕಿನ್ನಿಗೋಳಿ ಹೆದ್ದಾರಿ ಸಮೀಪ ಕಳೆದ ಒಂದೂವರೆ ಶತಮಾನಕ್ಕಿಂತಲೂ ಹೆಚ್ಚು ಕಾಲ ವಾಸವಿದ್ದ ಕಂಬೊಲಿ ಕೊರಗ ಕುಟುಂಬಕ್ಕೆ ಕೊನೆಗೂ ಭೂಮಿಯ ಹಕ್ಕುಪತ್ರ ಸಿಕ್ಕಿದೆ. ಈ ಕುಟುಂಬ ತನ್ನ ಅಜ್ಜ, ಅಜ್ಜಿ ಪಾರ ಕೊರಗ ಮತ್ತು ಸೀಗೆ ಕೊರಗರ ಕಾಲದಿಂದ ವಾಸಿಸುತ್ತಿದೆ. ಸರ್ಕಾರಿ ಜಮೀನಿನಲ್ಲಿ ಅಂದಿನಿಂದ ವಾಸಿಸುತ್ತಿದ್ದ ಕುಟುಂಬಕ್ಕೆ ಕಳೆದ 100 ವರ್ಷಗಳಲ್ಲಿ ಅನೇಕ ಸರ್ಕಾರಗಳು, ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ಹೋದರೂ ಕೂಡ ಹಕ್ಕು ಪತ್ರ ಎಂಬುವುದು ಕನಸಾಗಿಯೇ ಉಳಿದಿತ್ತು. ಆದರೆ, ಈ ಬಾರಿ ಮಾಡಿದ ಪ್ರಯತ್ನ ಮಾತ್ರ ವ್ಯರ್ಥವಾಗಿಲ್ಲ.
ಇದನ್ನೂ ಓದಿ:'ನಮ್ಮೂರಿಗೆ ಯಾರೂ ಕನ್ಯೆ ಕೊಡ್ತಿಲ್ಲ' ಅಂತಿದ್ದವ್ರಿಗೆ ಕೊನೆಗೂ ಸಿಕ್ತು ಮನೆ ಹಕ್ಕುಪತ್ರ: ಈಟಿವಿ ಭಾರತ ಫಲಶ್ರುತಿ