ಮಂಗಳೂರು :ನಗರದ ವಲಚ್ಚಿಲ್ ಶ್ರೀನಿವಾಸ ಫಾರ್ಮಸಿ ಕಾಲೇಜ್ವೊಂದರ ನಾಲ್ವರು ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢವಾಗಿರುವ ಕಾರಣ ಪ್ರಾಂಶುಪಾಲರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.
ನಾಲ್ವರೂ ಕೇರಳದ ವಿದ್ಯಾರ್ಥಿಗಳಾಗಿದ್ದು, ಇವರು ತಮ್ಮ ರಾಜ್ಯದಿಂದ ನಗರದ ಕಾಲೇಜಿಗೆ ಬರುವಾಗ ತಪಾಸಣೆ ನಡೆಸಿ ನೆಗೆಟಿವ್ ವರದಿ ಇಲ್ಲದೆ ಬಂದಿದ್ದರು. ಇದೀಗ ಅವರನ್ನು ತಪಾಸಣೆ ನಡೆಸಿದಾಗ ನಾಲ್ವರಲ್ಲಿಯೂ ಸೋಂಕು ದೃಢಪಟ್ಟಿದೆ.