ಮಂಗಳೂರು: ಜಿಲ್ಲೆಯ ಬೋಳಿಯಾರು ಗ್ರಾಮದ ಕಾಪಿಕಾಡು ಪ್ರದೇಶದ ವ್ಯಕ್ತಿಗೆ ನಿನ್ನೆ ಕೋವಿಡ್-19 ಸೋಂಕು ದೃಢ ಪಟ್ಟ ಹಿನ್ನೆಲೆ, ಇಂದು ಆ ಪ್ರದೇಶವನ್ನು ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶ ಹೊರಡಿಸಿದ್ದಾರೆ.
ಮುಂಬೈನಿಂದ ಬಂದಿರುವ 61 ವರ್ಷದ ವ್ಯಕ್ತಿಗೆ ನಿನ್ನೆ ಸೋಂಕು ದೃಢಗೊಂಡಿತ್ತು. ದೇರಳಕಟ್ಟೆ ಸಾಂಸ್ಥಿಕ ಕ್ವಾರಂಟೈನ್ ಸೆಂಟರ್ ನಲ್ಲಿದ್ದ ವ್ಯಕ್ತಿಯನ್ನು ವರದಿ ಬರುವ ಮೊದಲೇ ಮನೆಗೆ ಕಳುಹಿಸಲಾಗಿತ್ತು. ಆದರೆ ಸೋಂಕಿತನನ್ನ ನಿನ್ನೆ ಮನೆಯಿಂದ ಮತ್ತೆ ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಮಂಗಳೂರು: ಬೋಳಿಯಾರು ಗ್ರಾಮದ ಕಾಪಿಕಾಡು ಪ್ರದೇಶ ಸೀಲ್ಡೌನ್ - ಬೋಳಿಯಾರು ಗ್ರಾಮದ ಕಾಪಿಕಾಡು
ಮುಂಬೈನಿಂದ ಬಂದಿರುವ 61 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ನಿನ್ನೆ ದೃಢಗೊಂಡಿದ್ದು, ಆತನಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ದೇರಳಕಟ್ಟೆ ಸಾಂಸ್ಥಿಕ ಕ್ವಾರಂಟೈನ್ ಸೆಂಟರ್ ನಲ್ಲಿದ್ದ ಸೋಂಕಿತನನ್ನು ವರದಿ ಬರುವ ಮೊದಲೇ ಮನೆಗೆ ಕಳುಹಿಸಲಾಗಿತ್ತು. ನಿನ್ನೆ ಮನೆಯಿಂದ ಮತ್ತೆ ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
Kapikadu area seal down
ಈ ಹಿನ್ನೆಲೆಯಲ್ಲಿ ಇಂದು ಬೋಳಿಯಾರು ಗ್ರಾಮದ ಕಾಪಿಕಾಡು ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಸದ್ಯ ಸೀಲ್ ಡೌನ್ ಮಾಡಲಾಗಿರುವ ಪ್ರದೇಶದೊಳಗೆ 25 ಮನೆಗಳಿದ್ದು, 320 ಮಂದಿ ವಾಸಿಸುತ್ತಿದ್ದಾರೆ. ಸೀಲ್ ಡೌನ್ ಆಗಿರುವ ಪ್ರದೇಶಕ್ಕೆ ಜಿ.ಪಂ.ನ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರನ್ನು ಅಧಿಕಾರಿಯಾಗಿ ನೇಮಕ ಮಾಡಿ ಡಿಸಿ ಆದೇಶಿಸಿದ್ದಾರೆ.
Last Updated : Jun 1, 2020, 2:04 AM IST