ಕರ್ನಾಟಕ

karnataka

ETV Bharat / state

ವಿದ್ವಾಂಸ ಪೊಳಲಿ ಕಾರಂತರ ಅಧ್ಯಕ್ಷತೆಯಲ್ಲಿ ಮಂಗಳೂರು ಸಾಹಿತ್ಯ ಸಮ್ಮೇಳನ - Mangalore Literary Conference news

ಅಂದು ಬೆಳಗ್ಗೆ 9.30ಕ್ಕೆ ಎಂಆರ್​​​ಪಿಎಲ್​​ನ ಸಿಆರ್​​​ಎಸ್ ಉಪ ಮಹಾಪ್ರಬಂಧಕಿ ವೀಣಾ ಶೆಟ್ಟಿ ಸಮ್ಮೇಳನ ಉದ್ಘಾಟನೆ‌ ನೆರವೇರಿಸಲಿರುವರು. ಶಾಸಕ ಡಾ. ವೈ.ಭರತ್ ‌ಶೆಟ್ಟಿಯವರು ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ.

Mangalore kannada Literary Conference news
ಮಂಗಳೂರು ಸಾಹಿತ್ಯ ಸಮ್ಮೇಳನ

By

Published : Feb 5, 2021, 3:24 PM IST

ಮಂಗಳೂರು: ನಗರದ ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ನಟರಾಜ ರಂಗ ಸಂಗಮ ವೇದಿಕೆಯಲ್ಲಿ ಫೆ. 9ರಂದು ಹಿರಿಯ ವಿದ್ವಾಂಸ, ಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂದ ಕಾರಂತರ ಅಧ್ಯಕ್ಷತೆಯಲ್ಲಿ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ದ.ಕ ಜಿಲ್ಲಾ ಕಸಪಾ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಹೇಳಿದರು.

ಮಂಗಳೂರು ಸಾಹಿತ್ಯ ಸಮ್ಮೇಳನ

ಓದಿ: ಸಾಹಿತಿಗಳಿಗೆ ರಕ್ಷಣೆ ನೀಡಲು ರಾಜ್ಯ ಸರ್ಕಾರ ವಿಫಲ: ಸಿದ್ದರಾಮಯ್ಯ

ನಗರದ ಪ್ರೆಸ್ ಕ್ಲಬ್​​ನಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8.30ಕ್ಕೆ ಭುವನೇಶ್ವರಿ ತಾಯಿಯ ಮೆರವಣಿಗೆ ಮೂಲಕ‌ ಸಮ್ಮೇಳನ ಆರಂಭವಾಗಲಿದ್ದು, ಮನಪಾ ಮೇಯರ್ ದಿವಾಕರ ಪಾಂಡೇಶ್ವರ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ ಎಂದು ಹೇಳಿದರು.

ಬೆಳಗ್ಗೆ 9.30ಕ್ಕೆ ಎಂಆರ್​​​ಪಿಎಲ್​​ನ ಸಿಆರ್​​​ಎಸ್ ಉಪ ಮಹಾಪ್ರಬಂಧಕಿ ವೀಣಾ ಶೆಟ್ಟಿ ಸಮ್ಮೇಳನ ಉದ್ಘಾಟನೆ‌ ನೆರವೇರಿಸಲಿರುವರು. ಶಾಸಕ ಡಾ. ವೈ.ಭರತ್ ‌ಶೆಟ್ಟಿಯವರು ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಪರಿಸರ, ಸಾಹಿತ್ಯ, ಯಕ್ಷಗಾನದ ನೂತನ ಆಯಾಮ ಎಂಬ ವಿಚಾರದ ಬಗ್ಗೆ ಗೋಷ್ಠಿ ನಡೆಯಲಿದೆ. ಬಳಿಕ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2.45ಕ್ಕೆ ಸಮಾರೋಪ ನಡೆಯಲಿದ್ದು, ಈ ಸಂದರ್ಭ ಸನ್ಮಾನ ಕಾರ್ಯಕ್ರಮ ನೆರವೇರಲಿದೆ ಎಂದು ಪ್ರದೀಪ ಕುಮಾರ್ ಕಲ್ಕೂರ ಹೇಳಿದರು.

ABOUT THE AUTHOR

...view details