ಮಂಗಳೂರು: ದ.ಕ.ಜಿಲ್ಲೆಯ ಮಂಗಳೂರು ತಾಲೂಕಿನ ಜಪ್ಪಿನ ಮೊಗರು ಗ್ರಾಮದ ಜಪ್ಪು ಪಟ್ಟಣದ 31 ವರ್ಷದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಆಗಿ ಪರಿವರ್ತಿಸಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಮಂಗಳೂರಿನ ಜಪ್ಪು ಪಟ್ಟಣ ಸೀಲ್ ಡೌನ್ : ಜಿಲ್ಲಾಧಿಕಾರಿ ಆದೇಶ
ಮಂಗಳೂರು ತಾಲೂಕಿನ ಜಪ್ಪಿನ ಮೊಗರು ಗ್ರಾಮದ ಜಪ್ಪು ಪಟ್ಣಣವನ್ನು ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್
ಜಪ್ಪಿನಮೊಗರು ಗ್ರಾಮದ ಪೂರ್ವದಲ್ಲಿ ಕ್ಯಾನನ್ ಸೆಂಟರ್, ಪಶ್ಚಿಮದಲ್ಲಿ ರೈಲ್ವೆ ಟ್ರ್ಯಾಕ್ (ಉಳ್ಳಾಲದಿಂದ ಮಂಗಳೂರು ಜಂಕ್ಷನ್) ಉತ್ತರದಲ್ಲಿ ಕ್ಯಾಂಬ್ರಿಡ್ಜ್ ಸ್ಕೂಲ್ ಹಾಗೂ ದಕ್ಷಿಣದಲ್ಲಿ ಜಪ್ಪು ಪಟ್ಟಣ ರಸ್ತೆವರೆಗೆ ಕಂಟೇನ್ಮೆಂಟ್ ಝೋನ್ ಆಗಿ ಪರಿವರ್ತಿಸಿ ಸೀಲ್ ಡೌನ್ ಮಾಡಲಾಗಿದೆ. ಇದೀಗ ಈ ಪ್ರದೇಶದಲ್ಲಿ 48 ಮನೆಗಳು, ಎರಡು ಅಂಗಡಿಗಳು ಹಾಗೂ ಒಂದು ಶಾಲೆ ಸೀಲ್ ಡೌನ್ ಆಗಿವೆ. ಅಲ್ಲದೆ ಕಂಟೇನ್ಮೆಂಟ್ ಝೋನ್ನಿಂದ 5 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
ಪೂರ್ವದಲ್ಲಿ ಬಜಾಲ್ ಫೈಸಲ್ ನಗರ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಉತ್ತರದಲ್ಲಿ ಬಿಕರ್ಣಕಟ್ಟೆ ಹಾಗೂ ದಕ್ಷಿಣದಲ್ಲಿ ಉಳ್ಳಾಲದವರೆಗೆ ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಈ ಬಫರ್ ಝೋನ್ ನಲ್ಲಿ 32,500 ಮನೆಗಳಿದ್ದು, 925 ಅಂಗಡಿಗಳು, 58 ಕಚೇರಿಗಳು ಒಳಗೊಂಡಿವೆ.