ಮಂಗಳೂರು:ಮಂಗಳೂರಿನ ಇನ್ಸ್ಪೆಕ್ಟರ್ ಪುತ್ರನ ಸೈಕಲ್ ಕಳವು ಪ್ರಕರಣ ಬೆನ್ನತ್ತಿ ಹೋದ ಇಲ್ಲಿನ ಬರ್ಕೆ ಪೊಲೀಸರು 9 ಸೈಕಲ್ ಕಳವು ಪ್ರಕರಣಗಳನ್ನು ಭೇದಿಸಿದ್ದಾರೆ.
ಮಂಗಳೂರಿನ ಇನ್ಸ್ಪೆಕ್ಟರ್ ಶರೀಫ್ ಅವರ ಪುತ್ರನ ಸೈಕಲನ್ನು ಅಪಾರ್ಟ್ಮೆಂಟ್ನ ಪಾರ್ಕಿಂಗ್ ಏರಿಯಾದಿಂದ ಇತ್ತೀಚೆಗೆ ಕಳವು ಮಾಡಲಾಗಿತ್ತು. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕಳವು ಪ್ರಕರಣ ಬೆನ್ನತ್ತಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣ ಕುರಿತು ಮಂಗಳೂರು ಕಮಿಷನರ್ ಮಾಹಿತಿ ‘ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹನುಮಂತ (35), ಶಿವಮೊಗ್ಗ ಜಿಲ್ಲೆಯ ಮಂಜುರಾಜ್ (29), ಮಂಗಳೂರು ತಾಲೂಕಿನ ಕುತ್ತಾರಿನ ಶಂಕರ ಶೆಟ್ಟಿ(66) ಬಂಧಿತರು. ಇವರು ಮಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಹಣವಿಲ್ಲದ ವೇಳೆ ಸೈಕಲ್ಗಳನ್ನು ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದರು.
ಸುಮಾರು 20 ಸಾವಿರ ಮೌಲ್ಯದ ಸೈಕಲನ್ನು ಕದ್ದು 500- 1000 ರೂ.ಗಳಿಗೆ ಮಾರುತ್ತಿದ್ದರು. ಪೊಲೀಸರು ಇವರ ಬಳಿಯಿಂದ ರೂ 1.5 ಲಕ್ಷ ರೂ. ಮೌಲ್ಯದ 9 ಸೈಕಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಸ್ಪೀಡ್ ಬ್ರೇಕರ್ ಬಳಿ ಎಗರಿದ ಬೈಕ್: ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಲಾರಿ