ಕರ್ನಾಟಕ

karnataka

By

Published : Sep 8, 2019, 9:41 PM IST

ETV Bharat / state

ಸೆಂಥಿಲ್ ತಮ್ಮ ಅಧಿಕಾರಾವಧಿಯಲ್ಲಿ ಭಾರೀ ಅಕ್ರಮ ಎಸಗಿದ್ದಾರೆ: ಜೈರಾಜ್​​ ಶೆಟ್ಟಿ ಆರೋಪ

ಸಸಿಕಾಂತ್​​ ಸೆಂಥಿಲ್ ಅವರ ಅವಧಿಯಲ್ಲಿ ನಡೆದಿರುವ ಅಕ್ರಮ ಮತ್ತು ಭ್ರಷ್ಟಾಚಾರದ ಕುರಿತು ಸೂಕ್ತ ತನಿಖೆ ನಡೆಸುವಂತೆ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ‌. ಅದರ ಅಂತಿಮ ವರದಿ ಇನ್ನೇನು ಹೊರಬರಲಿದ್ದು, ಅವರ ಹಗರಣಗಳ ಬಗ್ಗೆಯೂ ತಿಳಿದು ಬರಲಿದೆ ಎಂದರು.

ಜೈರಾಜ್ ಶೆಟ್ಟಿ

ಮಂಗಳೂರು: ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ನೂರಾರು ಕುಟುಂಬಗಳನ್ನು ನಿರ್ಗತಿಕರನ್ನಾಗಿಸಿದ್ದಾರೆ ಎಂದು ದಕ್ಷಿಣ ಕನ್ನಡ ಮರಳು ಸಾಗಾಟ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಜೈರಾಜ್ ಶೆಟ್ಟಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ಅವಧಿಯಲ್ಲಿ ನಡೆದಿರುವ ಅಕ್ರಮ ಮತ್ತು ಭ್ರಷ್ಟಾಚಾರದ ಕುರಿತು ಸೂಕ್ತ ತನಿಖೆ ನಡೆಸುವಂತೆ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ‌. ಅದರ ಅಂತಿಮ ವರದಿ ಇನ್ನೇನು ಹೊರಬರಲಿದ್ದು, ಅವರ ಹಗರಣಗಳ ಬಗ್ಗೆಯೂ ತಿಳಿದು ಬರಲಿದೆ ಎಂದರು.

ಜೈರಾಜ್ ಶೆಟ್ಟಿ

ಸಸಿಹಿತ್ಲು ಮೀನುಗಾರಿಕಾ ಬಂದರ್​ಗಾಗಿ ಹೂಳೆತ್ತಿ ಸಂಗ್ರಹಿಸಿದ್ದ 10 ಸಾವಿರ ಮೆಟ್ರಿಕ್ ಟನ್ ಮರಳನ್ನು ಒಂದೇ ದಿನದಲ್ಲಿ ಪಾರದರ್ಶಕತೆ ಉಲ್ಲಂಘಿಸಿ ಕಡೆಯ ದಿನವೆಂದು ಘೋಷಿಸಿದ್ದಾರೆ‌. ಮರಳು ಸಾಗಾಟದ ಲಾರಿಗಳಿಗೆ ಜಿಪಿಎಸ್ ಅಳವಡಿಕೆಯಲ್ಲಿಯೂ ಭಾರೀ ಅವ್ಯವಹಾರ ಆಗಿದ್ದು, ವಶಕ್ಕೆ ಪಡೆದ ಮರಳನ್ನು ಒಂದೇ ಕಂಪನಿಗೆ ಕೊಟ್ಟು ಅಕ್ರಮವೆಸಗಿದ್ದಾರೆ ಎಂದು ದೂರಿದರು.
'ಸ್ಯಾಂಡ್ ಬಜಾರ್' ಆ್ಯಪ್ ಮೂಲಕ ಸೆಂಥಿಲ್ ಅವ್ಯವಹಾರ ಮಾಡಿದ್ದಾರೆ. ಒಂದೇ ಪರ್ಮಿಟ್‍ಗೆ ಹಲವೆಡೆ ಅಕ್ರಮ ಮರಳು ತೆಗೆಯಲು ಒಪ್ಪಿಗೆ ನೀಡಿದ್ದರು. ತುಂಬೆ ಡ್ಯಾಂ ಡ್ರೆಜ್ಜಿಂಗ್ ನೆಪದಲ್ಲಿ ಅವ್ಯವಹಾರ ಮಾಡಿದ್ದಾರೆ. ದಿಲ್ಲಿ ಕಂಪನಿಗೆ ಕಾನೂನು ಉಲ್ಲಂಘಿಸಿ ಟೆಂಡರ್ ಕೊಟ್ಟಿದ್ದಾರೆ ಎಂದು ಆರೋಪಗಳ ಸುರಿಮಳೆಯನ್ನೇ ಮಾಡಿದರು.

ABOUT THE AUTHOR

...view details