ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಾರುವ ಮೀನು - mangalore infrequent fish

ಈ ಮೀನುಗಳು ಹೆಚ್ಚಾಗಿ ಆಳಸಮುದ್ರದಲ್ಲಿ ಕಾಣಸಿಗುತ್ತವೆ. ಇವುಗಳಿಗೆ ಹಕ್ಕಿಗಳಂತೆ ರೆಕ್ಕೆ ಇದ್ದು, ಇವು ಸಮುದ್ರ ನೀರಿನಿಂದ ಮೇಲೆ ಬಂದು ಹಕ್ಕಿಗಳಂತೆ ಹಾರಾಡುವ ಸಾಮರ್ಥ್ಯ ಹೊಂದಿವೆ..

mangalore-flying-fish
ಮಂಗಳೂರಿನಲ್ಲಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಾರುವ ಮೀನು

By

Published : Feb 18, 2022, 3:58 PM IST

ಮಂಗಳೂರು: ಮೀನುಗಾರರ ಬಲೆಗೆ ಬಿದ್ದ ಅಪರೂಪದ ಎರಡು ರೆಕ್ಕೆ ಇರುವ ಪಕ್ಷಿಗಳಂತೆ ಹಾರುವ ಮೀನು.

ಮಂಗಳೂರಿನಲ್ಲಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಾರುವ ಮೀನು

ಎರಡು ದಿನಗಳ ಹಿಂದೆ ಮಂಗಳೂರಿನ ಧಕ್ಕೆಯ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನನ್ನು ಮೀನುಗಾರ ಲೋಕೇಶ್ ಬೆಂಗ್ರೆ ಎಂಬುವರು ಪತ್ತೆ ಹಚ್ಚಿದ್ದಾರೆ. ಈ ಮೀನಿಗೆ ಆಂಗ್ಲಭಾಷೆಯಲ್ಲಿ ಫ್ಲೈಯಿಂಗ್ ಫಿಶ್ ಮತ್ತು ತುಳುವಿನಲ್ಲಿ ಪಕ್ಕಿಮೀನು ಎಂದು ಕರೆಯುತ್ತಾರೆ.

ಈ ಮೀನುಗಳು ಹೆಚ್ಚಾಗಿ ಆಳಸಮುದ್ರದಲ್ಲಿ ಕಾಣಸಿಗುತ್ತವೆ. ಇವುಗಳಿಗೆ ಹಕ್ಕಿಗಳಂತೆ ರೆಕ್ಕೆ ಇದ್ದು, ಇವು ಸಮುದ್ರ ನೀರಿನಿಂದ ಮೇಲೆ ಬಂದು ಹಕ್ಕಿಗಳಂತೆ ಹಾರಾಡುವ ಸಾಮರ್ಥ್ಯ ಹೊಂದಿವೆ.

ಈ ಮೀನುಗಳು ಮೀನುಗಾರರ ಬಲೆಗೆ ಬೀಳುವುದು ಅಪರೂಪ. ಈ ಅಪರೂಪದ ಮೀನು ಮೀನುಗಾರರ ಬಲೆಗೆ ಬಿದ್ದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ:ತಹಬದಿಗೆ ಬಾರದ ವಿಧಾನಸಭೆ ಕಲಾಪ ; ಸದನವನ್ನು ಸೋಮವಾರಕ್ಕೆ ಮುಂದೂಡಿದ ಸ್ಪೀಕರ್

ABOUT THE AUTHOR

...view details