ಮಂಗಳೂರು :ನಾಡದೋಣಿ ಮೀನುಗಾರರು ಕೊರೊನಾ ನಂತರ ಸೀಮೆ ಎಣ್ಣೆ ಅಭಾವದಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದು ಸರ್ಕಾರ ಶೀಘ್ರ ಸೀಮೆ ಎಣ್ಣೆಯ ವ್ಯವಸ್ಥೆ ಮಾಡಬೇಕೆಂದು ದ.ಕ ಜಿಲ್ಲಾ ಗಿಲ್ ನೆಟ್ ಮೀನುಗಾರರ ಸಂಘ ಆಗ್ರಹಿಸಿದೆ.
ಜಿಲ್ಲಾ ಗಿಲ್ ನೆಟ್ ಮೀನುಗಾರರ ಸಂಘದ ಕಾರ್ಯಾಧ್ಯಕ್ಷ ಸುಭಾಷ್ ಕಾಂಚನ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಸುಭಾಷ್ ಕಾಂಚನ್ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,322 ನಾಡದೋಣಿಗಳಿಗೆ ಸೀಮೆ ಎಣ್ಣೆ ಪರವಾನಿಗೆ ನೀಡಲಾಗಿದೆ. ಆದರೆ, ಅಕ್ಟೋಬರ್‌ನಲ್ಲಿ 500 ನಾಡದೋಣಿಗಳಿಗೆ ಮಾತ್ರ ಸೀಮೆ ಎಣ್ಣೆ ನೀಡಲಾಗಿದೆ.
ಡಿಸೆಂಬರ್ ತಿಂಗಳಿನಲ್ಲಿ ಯಾವುದೇ ದೋಣಿಗೂ ಸೀಮೆ ಎಣ್ಣೆ ನೀಡಲಾಗಿಲ್ಲ. ಜನವರಿ ತಿಂಗಳಲ್ಲಿ ಕೇವಲ ಕೇವಲ 130 ಲೀಟರ್‌ನಂತೆ ಸೀಮೆ ಎಣ್ಣೆ ವಿತರಿಸಲಾಗಿದೆ ಎಂದರು. ಸರ್ಕಾರದ ಘೋಷಣೆಯಂತೆ ಪ್ರತಿ ಪರ್ಮಿಟ್ಗೆ 300 ಲೀಟರ್ ಸೀಮೆ ಎಣ್ಣೆ ನೀಡಲು ಕ್ರಮ ಕೈಗೊಳ್ಳಬೇಕು.
ನಾಡದೋಣಿ ಮೀನುಗಾರಿಕೆ ಅವಲಂಬಿಸಿ ಸುಮಾರು 50 ಸಾವಿರ ಮೀನುಗಾರರು ಈ ವೃತ್ತಿ ಮಾಡುತ್ತಿದ್ದು, ಸೀಮೆ ಎಣ್ಣೆ ಅಭಾವದಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಸರ್ಕಾರ ಸೀಮೆ ಎಣ್ಣೆ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಇದೇ ವೇಳೆ ದ.ಕ ಜಿಲ್ಲಾ ಗಿಲ್ ನೆಟ್ ಮೀನುಗಾರರ ಸಂಘದ ಮುಖಂಡರಾದ ಅಲಿ ಹಸನ್, ಸತೀಶ್ ಕೋಟ್ಯಾನ್, ಬಿ ಎ ಬಶೀರ್, ಪ್ರಾಣೇಶ್ ಉಪಸ್ಥಿತರಿದ್ದರು.