ಕರ್ನಾಟಕ

karnataka

ETV Bharat / state

ಯುಎಇಯಲ್ಲಿ ನೆಲೆಸಿದ್ದ ಮಂಗಳೂರಿನ ಶಿಕ್ಷಣ ತಜ್ಞ ಪ್ರೊ.ಎಂ.ಅಬೂಬಕ್ಕರ್ ನಿಧನ - ಅಬೂಬಕ್ಕರ್ ನಿಧನ

ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ನೆಲೆಸಿದ್ದ ಶಿಕ್ಷಣ ತಜ್ಞ, ಶಿಕ್ಷಣ ಪ್ರೇಮಿ ಪ್ರೊ.ಎಂ.ಅಬುಬಕರ್ ಯುಎಇಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಮಂಗಳೂರಿನ ಶಿಕ್ಷಣತಜ್ಞ ಪ್ರೊ.ಎಂ.ಅಬೂಬಕ್ಕರ್ ನಿಧನ
ಮಂಗಳೂರಿನ ಶಿಕ್ಷಣತಜ್ಞ ಪ್ರೊ.ಎಂ.ಅಬೂಬಕ್ಕರ್ ನಿಧನ

By

Published : Mar 23, 2021, 2:24 PM IST

ಬಂಟ್ವಾಳ:ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ನೆಲೆಸಿದ್ದ ಶಿಕ್ಷಣ ತಜ್ಞ, ಶಿಕ್ಷಣ ಪ್ರೇಮಿ ಪ್ರೊ.ಎಂ.ಅಬುಬಕರ್ ತುಂಬೆ (59) ಯುಎಇಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಮಂಗಳೂರಿನ ಬದ್ರಿಯಾ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ತುಂಬೆ ಕಾಲೇಜಿನಲ್ಲೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸಕ್ತ ಯುಎಇ ಸ್ಕಾಲರ್ಸ್ ಇಂಡಿಯನ್ ಸ್ಕೂಲ್​ನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು. ಸಾಮಾಜಿಕ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು.

ಶಿಕ್ಷಣದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದ ಪ್ರೊ. ಅಬೂಬಕ್ಕರ್ ವಿವಿಧ ದೇಶಗಳ ಕಾಲೇಜುಗಳ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ABOUT THE AUTHOR

...view details