ಕರ್ನಾಟಕ

karnataka

ETV Bharat / state

ಮಂಗಳೂರು: 'ನ್ಯಾಯಾಧೀಶರಿಗೆ ಮಾತ್ರ ಪ್ರವೇಶ' ಬೋರ್ಡ್ ತೆರವು - ನ್ಯಾಯಾಧೀಶರಿಗೆ ಮಾತ್ರ ಪ್ರವೇಶ

ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮುಖ್ಯ ಪ್ರವೇಶ ದ್ವಾರದಲ್ಲಿ ವಕೀಲರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿಸಿ ಕೇವಲ ನ್ಯಾಯಧೀಶರಿಗಷ್ಟೇ ಪ್ರವೇಶ ಎಂಬ ಹೊಸ ನಿಯಮ ಜಾರಿ ಮಾಡಿ ಹಾಕಲಾದ ಬೋರ್ಡನ್ನು ತೆರವುಗೊಳಿಸಲಾಗಿದೆ.

Admission Board for Judges only
ನ್ಯಾಯಾಧೀಶರಿಗೆ ಮಾತ್ರ ಪ್ರವೇಶ ಬೋರ್ಡ್​

By

Published : Oct 17, 2022, 3:27 PM IST

ಮಂಗಳೂರು: ನಗರದ ಕೊಡಿಯಾಲ್​ಬೈಲ್​​ನಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮುಖ್ಯ ಪ್ರವೇಶ ದ್ವಾರದಲ್ಲಿ ವಕೀಲರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿಸಿ ಕೇವಲ ನ್ಯಾಯಧೀಶರಿಗಷ್ಟೇ ಪ್ರವೇಶ ಎಂಬ ಹೊಸ ನಿಯಮ ಜಾರಿ ಮಾಡಿ ಹಾಕಲಾದ ಬೋರ್ಡನ್ನು ತೆರವುಗೊಳಿಸಲಾಗಿದೆ.

ಬೋರ್ಡ್​ ತೆರವುಗೊಳಿಸಿರುವುದು

ಈ ಮುಂಚೆ ಜಿಲ್ಲಾ ನ್ಯಾಯಾಲಯ ಕಟ್ಟಡದ ಮುಖ್ಯ ದ್ವಾರದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿತ್ತು. ಆದರೆ ಏಕಾಏಕಿ ನೂತನವಾಗಿ ಜಾರಿಯಾಗಿರುವ ನಿಯಮದಿಂದ ನ್ಯಾಯಾಧೀಶರು ಮಾತ್ರ ಮುಖ್ಯದ್ವಾರದಿಂದ ಪ್ರವೇಶಿಸಬಹುದಾಗಿದೆ. ವಕೀಲರು ಹಾಗೂ ಸಾರ್ವಜನಿಕರಿಗೆ ಈ ದ್ವಾರದ ಮೂಲಕ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಬಗ್ಗೆ ಮುಖ್ಯ ದ್ವಾರದಲ್ಲಿ 'ನಿರ್ಬಂಧಿತ ಪ್ರದೇಶ, ನ್ಯಾಯಾಧೀಶರಿಗೆ ಮಾತ್ರ ಪ್ರವೇಶ' ಎಂಬ ನಾಮಫಲಕ ಹಾಕಲಾಗಿತ್ತು.

ನ್ಯಾಯಾಧೀಶರಿಗೆ ಮಾತ್ರ ಪ್ರವೇಶ ಬೋರ್ಡ್​

ಆದರೆ ಇಂದು ಮುಂಜಾನೆ ಈ ಬೋರ್ಡನ್ನು ತೆರವುಗೊಳಿಸಲಾಗಿದೆ. ಇಂದು ಮೊದಲಿನಂತೆಯೇ ಸಾರ್ವಜನಿಕರು ಮತ್ತು ವಕೀಲರು ಮುಖ್ಯ ದ್ವಾರದಿಂದಲೇ ನ್ಯಾಯಾಲಯಕ್ಕೆ ಹೋಗಿದ್ದಾರೆ.

ಇದನ್ನೂ ಓದಿ: ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರ, ಮಗು ಜನನ ಪ್ರಕರಣ- ಅಪರಾಧಿಗೆ 10 ವರ್ಷ ಜೈಲು

ABOUT THE AUTHOR

...view details