ಮಂಗಳೂರು: ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿ ಭಾಗವಾದ ಮಂಗಳೂರಿನ ತಲಪಾಡಿಯಲ್ಲಿ ಎರಡು ಪೆಟ್ರೋಲ್ ಬಂಕ್ಗಳು ಇವೆ. ಕೇರಳದ ಜಾಗದಲ್ಲಿ ಆ ರಾಜ್ಯದ ಪೆಟ್ರೋಲ್ ಬಂಕ್ ಮತ್ತು ಕರ್ನಾಟಕದ ಪ್ರದೇಶದಲ್ಲಿ ನಮ್ಮ ರಾಜ್ಯದ ಪೆಟ್ರೋಲ್ ಬಂಕ್ ಇದೆ. ಈ ಎರಡೂ ಪೆಟ್ರೋಲ್ ಬಂಕ್ಗಳು ಅರ್ಧ ಕಿಲೋಮೀಟರ್ ಅಂತರದಲ್ಲಿದ್ದು, ಇವುಗಳಲ್ಲಿ ಕರ್ನಾಟಕದ ಪೆಟ್ರೋಲ್ ಬಂಕ್ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
ಪ್ರತಿ ರಾಜ್ಯದಲ್ಲೂ ಪೆಟ್ರೋಲ್, ಡೀಸೆಲ್ಗೆ ಭಿನ್ನ ದರವಿದೆ. ಕೇರಳ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕರ್ನಾಟಕಕ್ಕಿಂತ ದುಬಾರಿಯಾಗಿದ್ದು, ಕೇರಳ ಗಡಿಭಾಗದ ವಾಹನ ಸವಾರರು ಕರ್ನಾಟಕದ ಪೆಟ್ರೋಲ್ ಬಂಕ್ಗೆ ಬಂದು ಪೆಟ್ರೋಲ್- ಡೀಸೆಲ್ ಹಾಕಿಸಿಕೊಳ್ಳುತ್ತಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ( ಮಾರ್ಚ್ 23) ಪೆಟ್ರೋಲ್ ದರ ರೂ.107.43, ಡೀಸೆಲ್ ದರ ರೂ. 94.56 ಇದೆ.