ಮೂಡುಬಿದಿರೆ:ರಸ್ತೆ ದಾಟಿ ಮತ್ತೊಂದು ಕಡೆ ಓಡುತ್ತಿದ್ದ ಜಿಂಕೆಯೊಂದು ಮನೆ ಎದುರಿನ ಕಬ್ಬಿಣದ ಗೇಟ್ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನಪ್ಪಿದ ಘಟನೆ ಮೂಡಬಿದಿರೆ ತಾಲೂಕಿನ ಮರಿಯಾಡಿಯಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಮೂರು ವರ್ಷದ ಹೆಣ್ಣು ಜಿಂಕೆ ಮೃತಪಟ್ಟಿದೆ. ಮೂಡಬಿದಿರೆಯ ಮಾರ್ಪಾಡಿ ಕಡೆಯಿಂದ ವೇಗವಾಗಿ ರಸ್ತೆ ದಾಟಿ ಮತ್ತೊಂದು ಕಡೆಗೆ ಓಡುತ್ತಿದ್ದ ವೇಳೆ ಜಿಂಕೆ ಗೇಟ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಜಿಂಕೆಯ ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಬಲವಾದ ಏಟು ತಗುಲಿದೆ. ಬಳಿಕ ನೆಲಕ್ಕೆ ಬಿದ್ದು ಸಾವನ್ನಪ್ಪಿದೆ.