ಮಂಗಳೂರು: ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಸಿಲುಕಿದ ಮೀನುಗಾರನೊಬ್ಬ ಹೊರ ಬರಲಾಗದೆ ಸಾವನ್ನಪ್ಪಿರುವ ಘಟನೆ ಸುರತ್ಕಲ್ನ ಗುಡ್ಡೆಕೊಪ್ಲ ಸಮುದ್ರ ತೀರದಲ್ಲಿ ನಡೆದಿದೆ.
ಮಂಗಳೂರು: ಮೀನಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿ ಮೀನುಗಾರ ಸಾವು - ಮೀನಿಗೆ ಹಾಕಿದ್ದ ಬಲೆಯಲ್ಲಿ ಮೀನುಗಾರ ಸಾವು
ಮಂಗಳೂರಿನ ಸುರತ್ಕಲ್ನ ಗುಡ್ಡೆಕೊಪ್ಲ ಸಮುದ್ರ ತೀರದಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಸಿಲುಕಿದ ಮೀನುಗಾರನೊಬ್ಬ ಹೊರ ಬರಲಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೀನುಗಾರ ಸಾವು
ಸುರತ್ಕಲ್ ನಿವಾಸಿ ಲೋಕೇಶ್ ಕುಂದರ್ (42) ಮೃತಪಟ್ಟ ವ್ಯಕ್ತಿ. ಈತ ಸಮುದ್ರದ ದಡದಲ್ಲಿ ರಬ್ಬರ್ ಟ್ಯೂಬ್ ಬಳಸಿಕೊಂಡು ಈಜುತ್ತಾ ಮೀನು ಹಿಡಿಯಲು ಬಲೆ ಹಾಕುತ್ತಿದ್ದ. ಈ ವೇಳೆ ಬೃಹತ್ ತೆರೆಯೊಂದರಲ್ಲಿ ಲೋಕೇಶ್ ಸಿಲುಕಿಕೊಂಡಿದ್ದಾನೆ. ಬಲೆಯನ್ನು ಬಿಡಿಸಲು ಯತ್ನಿಸಿ ಅಸ್ವಸ್ಥನಾಗಿದ್ದ. ಇದೇ ವೇಳೆ ಸುರಕ್ಷತೆಗೆ ಇದ್ದ ರಬ್ಬರ್ ಟ್ಯೂಬ್ ಕೂಡ ಜಾರಿತ್ತು. ಹೀಗಾಗಿ ಹೊರ ಬರಲಾಗದೆ ನರಳುತ್ತಿದ್ದಾಗ ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.