ಮಂಗಳೂರು: ಒಳ ಉಡುಪಿನಲ್ಲಿ 18.95 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಮಹಿಳೆಯರ ಒಳ ಉಡುಪಿನಲ್ಲಿ 18.95 ಲಕ್ಷ ಮೌಲ್ಯದ ಚಿನ್ನ ಸಾಗಣೆ: ಮಂಗಳೂರಿನಲ್ಲಿ ಓರ್ವ ವಶಕ್ಕೆ - ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು
ಮಹಿಳೆಯರು ಬಳಸುವ ಒಳ ಉಡುಪಿನ ರಟ್ಟಿನ ಪೆಟ್ಟಿಗೆಯಲ್ಲಿ ಅಪಾರ ಪ್ರಮಾಣದ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
![ಮಹಿಳೆಯರ ಒಳ ಉಡುಪಿನಲ್ಲಿ 18.95 ಲಕ್ಷ ಮೌಲ್ಯದ ಚಿನ್ನ ಸಾಗಣೆ: ಮಂಗಳೂರಿನಲ್ಲಿ ಓರ್ವ ವಶಕ್ಕೆ ಚಿನ್ನ ಸಾಗಾಟ](https://etvbharatimages.akamaized.net/etvbharat/prod-images/768-512-15633889-thumbnail-3x2-lek.jpg)
ಚಿನ್ನ ಸಾಗಾಟ
ದುಬೈ ನಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದಿಳಿದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಪ್ರಯಾಣಿಕನೊಬ್ಬನನ್ನ ವಿಚಾರಣೆ ನಡೆಸಿದಾಗ ಆತ ಮಹಿಳೆಯರು ಬಳಸುವ ಒಳ ಉಡುಪಿನ ರಟ್ಟಿನ ಪೆಟ್ಟಿಗೆಯಲ್ಲಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದದ್ದು ಬಯಲಾಗಿದೆ. ಆರೋಪಿಯಿಂದ 364.5 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ರೂ 18,95,400 ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:ಫೇಸ್‌ಬುಕ್ ಫಾರಿನ್ ಗೆಳತಿ ನಂಬಿ 35 ಲಕ್ಷ ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ