ಕರ್ನಾಟಕ

karnataka

ETV Bharat / state

ವಿಶೇಷ ಒಲಿಂಪಿಕ್ಸ್​ನಲ್ಲಿ ಸಾಧನೆ ತೋರಿದ ಮಕ್ಕಳು: ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ - Children

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸಾನಿಧ್ಯದ ವಿದ್ಯಾರ್ಥಿ ಅಭಿಲಾಷ್ ಮೂರು ಚಿನ್ನ, ಒಂದು ಕಂಚು , ಪ್ರಜ್ವಲ್ ಲೋಬೋ ಮೂರು ಚಿನ್ನ ಒಂದು ಬೆಳ್ಳಿ, ಸೈಂಟ್ ಆಗ್ನೆಸ್ ವಿಶೇಷ ಶಾಲೆಯ ವಿದ್ಯಾರ್ಥಿ ಆ್ಯಸ್ಲಿ ಡಿಸೋಜ ನಾಲ್ಕು ಕಂಚಿನ ಪದಕ, ನಿಜಾಮುದ್ದೀನ್ ಭಾಗವಹಿಸಿದ ಪುಟ್ ಬಾಲ್ ತಂಡ ನಾಲ್ಕನೇ ಸ್ಥಾನ ಪಡೆದಿದೆ.

ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ

By

Published : Mar 23, 2019, 3:31 AM IST

ಮಂಗಳೂರು: ಕೊಲ್ಲಿ ರಾಷ್ಟ್ರ ಅಬುದಾಬಿಯಲ್ಲಿ ನಡೆದ ವಿಶೇಷ ಒಲಿಂಪಿಕ್ಸ್​ನಲ್ಲಿ ಮಂಗಳೂರಿನಿಂದ ಭಾಗವಹಿಸಿದ ನಾಲ್ವರು ವಿಶೇಷ ವಿದ್ಯಾರ್ಥಿಗಳು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಈ ಹಿನ್ನೆಲೆ ಮಾ. 25 ಕ್ಕೆ ಮಂಗಳೂರಿಗೆ ಆಗಮಿಸುವ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ಸಾನಿಧ್ಯ ವಸತಿಯುತ ಶಾಲೆ ಆಡಳಿತಾಧಿಕಾರಿ ಡಾ. ವಸಂತಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸಾನಿಧ್ಯದ ವಿದ್ಯಾರ್ಥಿ ಅಭಿಲಾಷ್ ಮೂರು ಚಿನ್ನ, ಒಂದು ಕಂಚು , ಪ್ರಜ್ವಲ್ ಲೋಬೋ ಮೂರು ಚಿನ್ನ ಒಂದು ಬೆಳ್ಳಿ, ಸೈಂಟ್ ಆಗ್ನೆಸ್ ವಿಶೇಷ ಶಾಲೆಯ ವಿದ್ಯಾರ್ಥಿ ಆ್ಯಸ್ಲಿ ಡಿಸೋಜ ನಾಲ್ಕು ಕಂಚಿನ ಪದಕ, ನಿಜಾಮುದ್ದೀನ್ ಭಾಗವಹಿಸಿದ ಪುಟ್ ಬಾಲ್ ತಂಡ ನಾಲ್ಕನೇ ಸ್ಥಾನ ಪಡೆದಿದೆ.

ಮಾರ್ಚ್ 25 ರಂದು ಮಂಗಳೂರಿಗೆ ಆಗಮಿಸಿಲಿರುವ ಈ ಸಾಧಕರನ್ನು ಮಂಗಳೂರು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಿಂದ ಮಂಗಳೂರು ನಗರದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಿ ಮಂಗಳಾ ಸ್ಟೇಡಿಯಂನಲ್ಲಿ ಅಭಿನಂದಿಸಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details