ಮಂಗಳೂರು: ಸಮುದ್ರದಲ್ಲಿ ಸಂಭವಿಸಿದ ಬೋಟ್ ದುರಂತದಲ್ಲಿ ನಾಪತ್ತೆಯಾದ ಆರು ಮಂದಿಯ ಪೈಕಿ ಐವರ ಮೃತದೇಹ ಪತ್ತೆಯಾಗಿದೆ. ಇನ್ನೂ ಓರ್ವನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ನಿನ್ನೆ ಅನ್ಸಾರ್ ಎಂಬ ಮೀನುಗಾರನ ಮೃತದೇಹ ಸಿಕ್ಕಿದೆಯಾದರೂ ಸಮುದ್ರದಾಳದಿಂದ ಶವ ಮೇಲೆ ತರುವ ವೇಳೆ ಕೈಜಾರಿ ಕೆಳಗೆ ಬಿದ್ದಿದೆ. ಕತ್ತಲು ಕವಿಯುವವರೆಗೂ ಶೋಧ ನಡೆಸಲಾಯಿತಾದರೂ ಮತ್ತೆ ಮೃತದೇಹ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.