ಕರ್ನಾಟಕ

karnataka

ETV Bharat / state

ಬಂಟ್ವಾಳ ಬಾಲಕಿ ಮೇಲೆ ಗ್ಯಾಂಗ್​ ರೇಪ್ : ನಾಲ್ವರು ಆರೋಪಿಗಳ ಬಂಧನ - ಮಂಗಳೂರು ಸುದ್ದಿ

ಆರೋಪಿ ಸತೀಶ್ ಅತ್ಯಾಚಾರ ಎಸಗಲು ಲಾಡ್ಜ್ ಅವಕಾಶ ಮಾಡಿಕೊಟ್ಟಿದ್ದಲ್ಲದೇ ಲೈಂಗಿಕ ಶೋಷಣೆ ಮಾಡಿರುವುದಾಗಿ ಆಪಾದಿಸಲಾಗಿದೆ. ಬಳಿಕ ಸಂಜೆ ನೊಂದ ಬಾಲಕಿ ಬಸ್ ಮೂಲಕ ಬಂಟ್ವಾಳಕ್ಕೆ ಬಂದಿರುತ್ತಾರೆ. ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..

mangalore-bantwal-gang-rape-on-minior-girl
ಬಂಟ್ವಾಳ ಬಾಲಕಿ ಮೇಲೆ ಗ್ಯಾಂಗ್​ ರೇಪ್

By

Published : Oct 9, 2021, 10:19 PM IST

ಬಂಟ್ವಾಳ : ಕಾರಿನಲ್ಲಿ ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂಬ ಬಾಲಕಿಯೊಬ್ಬಳು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಬಂಟ್ವಾಳ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.

ಫೇಸ್​ಬುಕ್ ಮೂಲಕ ಬಾಲಕಿಗೆ ಪರಿಚಿತನಾಗಿದ್ದ ಯುವಕ, ತನ್ನ ಸ್ನೇಹಿತರೊಂದಿಗೆ ಅತ್ಯಾಚಾರ ಎಸಗಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ. ಘಟನೆ ಮಂಗಳೂರಿನಲ್ಲಿ ನಡೆದಿದೆ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.

ಘಟನೆಗೆ ಸಂಬಂಧಿಸಿ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಇನ್ಸ್‌ಪೆಕ್ಟರ್ ಟಿ ಡಿ ನಾಗರಾಜ್ ಮತ್ತು ತಂಡ ಆರೋಪಿಗಳಾದ ಕಾಪು ನಿವಾಸಿ ಕೆ ಎಸ್ ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್ ಹಾಗೂ ಇದಾಯತ್​ ಉಲ್ಲಾ ಎಂಬ ನಾಲ್ವರನ್ನು ಶನಿವಾರ ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸಿದಾಗ ಬಾಲಕಿಗೆ ಮೊದಲೇ ಪರಿಚಿತರಾಗಿದ್ದ ಆರೋಪಿಗಳು ಆಕೆಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ನಡೆಸಿದ ವಿಚಾರ ಬೆಳಕಿಗೆ ಬಂದಿದೆ.

ಈ ಕುರಿತು ಶನಿವಾರ ರಾತ್ರಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಕೆ ಎಸ್ ಶರತ್ ಶೆಟ್ಟಿ ಎಂಬ ಆರೋಪಿ ಬಾಲಕಿಯೊಂದಿಗೆ ಫೇಸ್​ಬುಕ್​​ನಲ್ಲಿ ಪರಿಚಯವಾಗಿದ್ದ. ಮೊಬೈಲ್​ನಲ್ಲಿ ಮಾತನಾಡುತ್ತಿದ್ದ. ಅಲ್ಲದೆ ಶರತ್​​ ಬಾಲಕಿಯನ್ನು ತನ್ನ ಸಂಬಂಧಿ ಮಾರುತಿ ಮಂಜುನಾಥ್​ಗೆ ಪರಿಚಯ ಮಾಡಿಸಿದ್ದಾನೆ. ಆರೋಪಿ ಮಂಜುನಾಥ್ ಬಾಲಕಿಯೊಂದಿಗೆ ಸಲುಗೆಯಿಂದ ಇದ್ದು ವಾಟ್ಸ್ಆ್ಯಪ್‌ನಲ್ಲಿ ಅಶ್ಲೀಲ ವಿಡಿಯೋ ಚಾಟ್ ಮಾಡಿಕೊಂಡಿರುತ್ತಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಅಕ್ಟೋಬರ್ 8ರಂದು ಆರೋಪಿ ಶರತ್ ಶೆಟ್ಟಿ ಬಾಲಕಿಗೆ ಮಂಗಳೂರಿಗೆ ಬರುವಂತೆ ತಿಳಿಸಿದ್ದ. ಬಾಲಕಿ ಬಸ್​ನಲ್ಲಿ ಮಂಗಳೂರಿಗೆ ತೆರಳಿ ಆರೋಪಿ ಶರತ್ ಶೆಟ್ಟಿಯನ್ನು ಭೇಟಿಯಾಗಿದ್ದಳು. ಆಗ ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್​ನಲ್ಲಿ ವಿಶ್ರಾಂತಿ ಮಾಡೋಣ ಎಂದು ಮಂಗಳೂರಿನ ಲಾಡ್ಜ್ ಒಂದಕ್ಕೆ ಕರೆದು ಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ನಂತರ ಆತನ ಸ್ನೇಹಿತ ಇದಾಯತ್ತುಲ್ಲನೂ ಅತ್ಯಾಚಾರ ಮಾಡಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸತೀಶ್ ಅತ್ಯಾಚಾರ ಎಸಗಲು ಲಾಡ್ಜ್ ಅವಕಾಶ ಮಾಡಿಕೊಟ್ಟಿದ್ದಲ್ಲದೇ ಲೈಂಗಿಕ ಶೋಷಣೆ ಮಾಡಿರುವುದಾಗಿ ಆಪಾದಿಸಲಾಗಿದೆ. ಬಳಿಕ ಸಂಜೆ ನೊಂದ ಬಾಲಕಿ ಬಸ್ ಮೂಲಕ ಬಂಟ್ವಾಳಕ್ಕೆ ಬಂದಿರುತ್ತಾರೆ. ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details