ಮಂಗಳೂರು: ದ.ಕನ್ನಡ ಜಿಲ್ಲೆಯಲ್ಲಿಂದು 84 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇಲ್ಲಿಯವರೆಗೆ 833 ಪ್ರಕರಣಗಳು ದೃಢಪಟ್ಟಿವೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 84 ಮಂದಿಗೆ ಸೋಂಕು - ಕೊರೊನಾ ಸುದ್ದಿ
ದ.ಕನ್ನಡ ಜಿಲ್ಲೆಯಲ್ಲಿಂದು 84 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು,ಈವರೆಗೆ 833 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 444 ಮಂದಿ ಗುಣಮುಖರಾಗಿದ್ದಾರೆ. 17 ಮಂದಿ ಸಾವನ್ನಪ್ಪಿದ್ದು, 372 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಶಾರ್ಜಾದಿಂದ ಬಂದ 6 ಮಂದಿ, ಹೊರರಾಜ್ಯದಿಂದ ಬಂದ ಒಬ್ಬ ವ್ಯಕ್ತಿ, 28 ಐಎಲ್ಐ ಪ್ರಕರಣ, 38 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. 11 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಇಂದು 71 ವರ್ಷದ ವೃದ್ದರೊಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂದು ಒಂದೇ ದಿನ ಮೂವರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ದ.ಕ ಜಿಲ್ಲೆಯಲ್ಲಿ ಈವರೆಗೆ 833 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 444 ಮಂದಿ ಗುಣಮುಖರಾಗಿದ್ದಾರೆ. 17 ಮಂದಿ ಸಾವನ್ನಪ್ಪಿದ್ದು, 372 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 381 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.