ಕರ್ನಾಟಕ

karnataka

ETV Bharat / state

ಫೇಸ್​ಬುಕ್​ ಪ್ರೇಮ: ಹುಡುಗನ ಹೆಸರಲ್ಲಿ ಪ್ರೀತಿ ನಾಟಕವಾಡಿದ ಮಂಗಳಮುಖಿ ಅರೆಸ್ಟ್​ - ಯುವತಿ ಜೊತೆ ಮಂಗಳಮುಖಿ ಪ್ರೇಮ ಪ್ರಕರಣ

ಫೇಸ್​ಬುಕ್​ ಗೆಳೆಯನ ಪ್ರೇಮಕ್ಕೆ ಸಿಲುಕಿದ ಯುವತಿಗೆ ಮೋಸ- ಹುಡುಗನ ಹೆಸರಲ್ಲಿ ಖಾತೆ ತೆರೆದು ಪ್ರೇಮದಾಟವಾಡಿದ ಮಂಗಳಮುಖಿ- ಬಂಟ್ವಾಳದಲ್ಲಿ ಆರೋಪಿ ಪೊಲೀಸ್​ ಬಲೆಗೆ

mangalamukhi-arrested-in-fake-facebook-account-and-love-case
ಫೇಸ್​ಬುಕ್​ ಪ್ರೇಮ: ಹುಡುಗನ ಹೆಸರಲ್ಲಿ ಪ್ರೀತಿ ನಾಟಕವಾಡಿದ ಮಂಗಳಮುಖಿ ಅರೆಸ್ಟ್​

By

Published : Jul 23, 2022, 1:12 PM IST

ಬಂಟ್ವಾಳ(ದಕ್ಷಿಣ ಕನ್ನಡ):ಹುಡುಗನ ಹೆಸರಲ್ಲಿ ಬಂಟ್ವಾಳ ತಾಲೂಕಿನ ಹುಡುಗಿಯೊಬ್ಬಳ ಜೊತೆ ಫೇಸ್​​ಬುಕ್​ನಲ್ಲಿ ಪ್ರೇಮದಾಟವಾಡುತ್ತಿದ್ದ ಮಂಗಳಮುಖಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಸಿವಿಲ್ ಇಂಜಿನಿಯರ್ ಎಂದು ಹೇಳಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ.

ಸುಮಾರು ನಾಲ್ಕು ವರ್ಷಗಳಿಂದ ಬಂಟ್ವಾಳದ ಯುವತಿ ಫೇಸ್​​ಬುಕ್ ಖಾತೆ ನಂಬಿ ಪ್ರೇಮದ ಬಲೆಗೆ ಬಿದ್ದಿದ್ದಳು. ಫೇಸ್​​ಬುಕ್​​ ಮೆಸೆಂಜರ್​ನಲ್ಲಿ ಚಾಟಿಂಗ್​, ದೂರವಾಣಿ ಕರೆಯಲ್ಲೂ ಇಬ್ಬರೂ ಮಾತನಾಡುತ್ತಿದ್ದರು. ಮಗಳ ಪ್ರೇಮ ಪ್ರಕರಣ ತಾಯಿಗೆ ಗೊತ್ತಾಗಿದ್ದು, ಬಳಿಕ ಈ ವಿಚಾರವನ್ನು ಬಂಟ್ವಾಳದ ನ್ಯಾಯವಾದಿ ಶೈಲಜಾ ರಾಜೇಶ್ ಬಳಿ ಹೇಳಿಕೊಂಡಿದ್ದರು.

ನ್ಯಾ. ಶೈಲಜಾ ಅವರು ವಿಟ್ಲ ಪೊಲೀಸರ ಸಹಾಯದಿಂದ ಪ್ರಕರಣದ ಜಾಡು ಹಿಡಿದು ಹೊರಟಾಗ ಫೇಸ್​​ಬುಕ್ ಗೆಳೆಯನ ಅಸಲಿ ಮುಖ ಬಯಲಾಗಿದೆ. ಮೊಬೈಲ್ ಲೊಕೇಶನ್ ಹುಡುಕಾಡಿಕೊಂಡು ಉಡುಪಿ ಜಿಲ್ಲೆಯ ಶಂಕರನಾರಾಯಣ ಎಂಬಲ್ಲಿಗೆ ಹೋದಾಗ, ಅಲ್ಲಿದ್ದದ್ದು ಮಂಗಳಮುಖಿ ಎಂಬುದು ಗೊತ್ತಾಗಿದೆ. ಇದೀಗ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳಮುಖಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ:Delhi Gang Rape.. ದೆಹಲಿ ನಿಲ್ದಾಣದಲ್ಲಿ ರೈಲ್ವೆ ಉದ್ಯೋಗಿಗಳಿಂದ ಮಹಿಳೆ ಮೇಲೆ ಗ್ಯಾಂಗ್ ರೇಪ್​

ABOUT THE AUTHOR

...view details