ಪುತ್ತೂರು:ಸ್ವಂತ ಸೂರಿಗಾಗಿ ಕಳೆದ 4-5 ವರ್ಷದಿಂದ ಪುತ್ತೂರು ಮಂದಾರಬೈಲಿನ ಯುವತಿ ಸುರಕ್ಷಾಳ ಸರ್ಕಾರಿ ಕಚೇರಿ ಅಲೆದಾಟಕ್ಕೆ ಮುಕ್ತಿ ಸಿಕ್ಕಿಲ್ಲ. ಈ ಮಧ್ಯೆ ಕುಟುಂಬದ ಹೆಸರಿನಲ್ಲಿ ಕೇರಳ ಮೂಲದ ಸಂಸ್ಥೆಯೊಂದು ಇವರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಸುರಕ್ಷಾಳ ಕುಟುಂಬಕ್ಕೆ ಹಸ್ತಾಂತರಿಸಲು ನಿರಾಕರಿಸಿದೆ.
ಓದಿ: ಸಂಪುಟ ವಿಶೇಷ ಸಭೆ ಕರೆದು ರದ್ದುಗೊಳಿಸಿದ ಸಿಎಂ!
ಪುತ್ತೂರು ನಗರಭಾ ವ್ಯಾಪ್ತಿಯ ಕೆಮ್ಮಿಂಜೆ ಸಮೀಪದ ಮಂದಾರ ಬೈಲು ನಿವಾಸಿಯಾಗಿರುವ ಸುರಕ್ಷಾ, ತನ್ನ ಅನಾರೋಗ್ಯ ಪೀಡಿತ ತಂದೆ - ತಾಯಿ ಹಾಗೂ ತಮ್ಮನ ಜತೆ ವಾಸವಾಗಿದ್ದು, ಪ್ರಸ್ಥುತ ಇರುವ ಜೋಪಡಿ ಮನೆ ಕುಸಿಯುವ ಹಂತಕ್ಕೆ ತಲುಪಿದೆ.
ಸರ್ಕಾರಿ ಜಮೀನಿನಲ್ಲಿ ಕಳೆದ 25 ವರ್ಷಗಳಿಂದ ವಾಸಿಸುತ್ತಿದ್ದ ಸುರಕ್ಷಾ ತಂದೆ ಪ್ರಕಾಶ್ ಪೂಜಾರಿ ಹಾಗೂ ಮೀನಾಕ್ಷಿ ಹೆಸರಿನಲ್ಲಿ 2018ರಲ್ಲಿ 96ಸಿಸಿ ಯೋಜನೆಯಡಿ 2.5 ಸೆನ್ಸ್ ನಿವೇಶನ ನೀಡಲಾಗಿದೆ. ಆದರೆ, ಹಳೆ ಮನೆ ಕಳೆದ ಮಳೆಗಾಲಕ್ಕೆ ಸಂಪೂರ್ಣ ಕುಸಿದಿದ್ದು, ಅಸುರಕ್ಷಿತ ಮನೆಯಲ್ಲೇ ಈ ಕುಟುಂಬ ವಾಸಿಸುತ್ತಿದೆ.
ಮತಾಂತರ ಭಯ:
ಇತ್ತೀಚೆಗೆ ಕೇರಳ ಮೂಲದ ಸಂಸ್ಥೆಯೊಂದು ಪ್ರಕಾಶ್ ಪೂಜಾರಿ ಅವರನ್ನು ಸಂಪರ್ಕಿಸಿ ನಿಮಗೆ ವಿದೇಶದ ದಾನಿಗಳಿಂದ 10 ಲಕ್ಷ ರೂ. ವೆಚ್ಚದ ಮನೆ ನಿರ್ಮಿಸುವುದಾಗಿ ತಿಳಿಸಿ ಮನೆಯ ಹಾಗೂ ಪ್ರಕಾಶ್ ಪೂಜಾರಿ ಅವರ ಮಕ್ಕಳ ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ್ದು ವೈರಲ್ ಆಗಿತ್ತು. ಪ್ರಕಾಶ್ ಪೂಜಾರಿ ಕುಟುಂಬದ ಹೆಸರಿನಲ್ಲಿ ಕೇರಳ ಮೂಲದ ಸಂಸ್ಥೆ ಈಗಾಗಲೇ 5 ಲಕ್ಷ ರೂ. ಮೊತ್ತದ ಹಣವನ್ನು ತಮ್ಮ ಬ್ಯಾಂಕ್ ಅಕೌಂಟ್ ನಂಬರ್ ನೀಡಿಯೇ ಸಂಗ್ರಹಿಸಿದ್ದು, ಪ್ರಕಾಶ್ ಪೂಜಾರಿ ಕುಟುಂಬಕ್ಕೆ ನೀಡಲು ನಿರಾಕರಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರು ಮನೆ ಆಮಿಷ ನೀಡಿ ಮತಾಂತರಕ್ಕೆ ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿ ತಾವೇ ಮನೆ ನಿರ್ಮಿಸಿ ಕೊಡಲು ಮುಂದಾಗಿದೆ.
ಕಚೇರಿ ಅಲೆದಾಟದಿಂದ ಸಿಗದ ಮುಕ್ತಿ: