ಕರ್ನಾಟಕ

karnataka

ETV Bharat / state

ಸೇತುವೆಯಿಂದ ಹಾರಿ ಆತ್ಮಹತ್ಯೆ ಯತ್ನ: ಪ್ರಾಣ ಕಾಪಾಡಿದ ನೇತ್ರಾವತಿ ವೀರರು

ಸೇತುವೆಯ ಮೇಲಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ್ನು ಗೂಡಿನ ಬಳಿಯ ಮಹಮ್ಮದ್ ಮತ್ತವರ ತಂಡ ರಕ್ಷಿಸಿದ್ದಾರೆ.

suicide
ಪ್ರಾಣ ಕಾಪಾಡಿದ ನೇತ್ರಾವತಿ ವೀರರು

By

Published : Oct 19, 2020, 5:57 PM IST

ಬಂಟ್ವಾಳ:ಪಾಣೆಮಂಗಳೂರಿನ ಗೂಡಿನ ಬಳಿಯ ಹಳೆ ಸೇತುವೆಯ ಮೇಲಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಗೂಡಿನ ಬಳಿಯ ಮಹಮ್ಮದ್ ಹಾಗೂ ಅವರ ತಂಡ ರಕ್ಷಿಸಿದೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಮೂಲತಃ ಹಾಸನ ಜಿಲ್ಲೆಯ ಕುಮಾರ್ ಎಂದು ಗುರುತಿಸಲಾಗಿದ್ದು, ಆತನಿಗೆ ಬಂಟ್ವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರು- ಬೆಂಗಳೂರು ಸಂಚರಿಸುವ ಖಾಸಗಿ ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕುಮಾರ್ ಇಂದು ಬೆಳಿಗ್ಗೆ 8.15 ರ ಸುಮಾರಿಗೆ ತನ್ನ ಖಾಕಿ ಸಮವಸ್ತ್ರ ಧರಿಸಿಕೊಂಡೆ ಸೇತುವೆಯ ಮೇಲಿಂದ ನದಿಗೆ ಧುಮುಕಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಇದನ್ನು ಕಂಡ ಸ್ಥಳೀಯರು ಈಜುಗಾರ ಮಹಮ್ಮದ್ ಅವರಿಗೆ ತಿಳಿಸಿದ್ದಾರೆ.

ದೋಣಿಯ ಮೂಲಕ ತೆರಳಿದ ಮಹಮ್ಮದ್, ಯುವಕನ್ನು ನೀರಿನಿಂದ ಮೇಲೆತ್ತಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ಕಾರಣ ತಿಳಿದು ಬಂದಿಲ್ಲ. ಮಹಮ್ಮದ್ ಅವರ ಈ ಕಾರ್ಯಚರಣೆಯಲ್ಲಿ ಶಿಹಾಬ್ ಮತ್ತು ಸ್ವಾಲಿ ಎಂಬವರು ಸಹಕಾರ ನೀಡಿದ್ದಾರೆ. ಇತ್ತೀಚೆಗೆ ಸೇವಾಂಜಲಿ ಪ್ರತಿಷ್ಠಾನದ ಸೇವಾ ರಕ್ಷಕ್ ದೋಣಿಯನ್ನು ಕೊಡುಗೆಯಾಗಿ ನೀಡಿದ್ದು, ಯುವಕನ ರಕ್ಷಣೆಗೆ ಇಂದು ಈ ದೋಣಿ ನೆರವಾಗಿದೆ.

ABOUT THE AUTHOR

...view details