ಪುತ್ತೂರು (ದ.ಕ.):ದೇಶಾದ್ಯಂತ ಲಾಕ್‌ಡೌನ್ ಹಿನ್ನೆಲೆ ಹಲವು ಕುಟುಂಬಗಳಿಗೆ ಉದ್ಯೋಗದ ಜೊತೆಗೆ ಯಾವುದೇ ಸಂಪಾದನೆಯೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಲಾಕ್‌ಡೌನ್ ಯಶಸ್ವಿಯಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ನಿತ್ಯ ಕರ್ತವ್ಯನಿರತ ಪೊಲೀಸರಿಗೆ ಆಹಾರ ಪೂರೈಸುವ ಕಾರ್ಯದಲ್ಲಿ ಪುತ್ತೂರಿನ ವ್ಯಕ್ತಿಯೊಬ್ಬರು ನಿರತರಾಗಿದ್ದಾರೆ.
ಪುತ್ತೂರಿನ ಪೊಲೀಸರ ಹಸಿವು ನೀಗಿಸುವ ಇವರಿಗೊಂದು ಸಲಾಂ.. - ಪೊಲೀಸರಿಗೆ ಆಹಾರ ಪೂರೈಸುವ ಕಾರ್ಯದಲ್ಲಿ ಪುತ್ತೂರಿನ ವ್ಯಕ್ತಿ
ಕ್ಯಾಟರಿಂಗ್ ವೃತ್ತಿಯಿಂದಲೇ ಜೀವನ ನಿರ್ವಹಿಸುತ್ತಿರುವ ದಿನೇಶ್ ಕುಟುಂಬಕ್ಕೂ ಲಾಕ್‌ಡೌನ್‌ನಿಂದಾಗಿ ಯಾವುದೇ ಆದಾಯವಿಲ್ಲ. ಆದರೂ ಜನರ ರಕ್ಷಣೆ ಮಾಡುವ ಪೊಲೀಸರಿಗೆ ಹಸಿವಿನ ಅನುಭವ ಆಗಬಾರದು ಎನ್ನುವ ಕಾರಣಕ್ಕಾಗಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಕ್ಯಾಟರಿಂಗ್ ನಡೆಸುವ ಪುತ್ತೂರಿನ ದಿನೇಶ್ ಪೈ ಪೊಲೀಸರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ದೇಶದಲ್ಲಿ ಲಾಕ್‌ಡೌನ್ ಆರಂಭಗೊಂಡ ದಿನದಿಂದ ದಿನೇಶ್ ಪೈ ಈ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಕ್ಯಾಟರಿಂಗ್ ವೃತ್ತಿಯಿಂದಲೇ ಜೀವನ ನಿರ್ವಹಿಸುತ್ತಿರುವ ದಿನೇಶ್ ಕುಟುಂಬಕ್ಕೂ ಲಾಕ್‌ಡೌನ್‌ನಿಂದಾಗಿ ಯಾವುದೇ ಆದಾಯವಿಲ್ಲ. ಆದರೂ ಜನರ ರಕ್ಷಣೆ ಮಾಡುವ ಪೊಲೀಸರಿಗೆ ಹಸಿವಿನ ಅನುಭವ ಆಗಬಾರದು ಎನ್ನುವ ಕಾರಣಕ್ಕಾಗಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಪುತ್ತೂರಿನ ಸುಮಾರು 18 ಲಾಕ್‌ಡೌನ್ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ 50ಕ್ಕೂ ಅಧಿಕ ಪೊಲೀಸರಿಗೆ ನಿತ್ಯ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆಯಲ್ಲಿ ಆಹಾರ ನೀಡುತ್ತಾರೆ.